ಚೆನ್ನೈ: ದುಲೀಪ್ ಟ್ರೋಫಿ ಫೈನಲ್ ಪಂದ್ಯದ ನಾಲ್ಕನೇ ದಿನದ ಅಂತ್ಯಕ್ಕೆ ಪೂರ್ವ ವಲಯ ತಂಡವು ಎರಡನೇ ಇನಿಂಗ್ಸ್ನಲ್ಲಿ 51 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 212 ರನ್ಗಳಿಸಿದೆ. 584 ರನ್ ಮುನ್ನಡೆ ಸಾಧಿಸಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪೂರ್ವ ವಲಯವು ನಾಯಕ ಇಶಾನ್ ಕಿಶನ್ ದ್ವಿಶತಕದ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ
708 ರನ್ ಗಳಿಸಿತ್ತು.ಮೂರನೇ ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿದ್ದ ದಕ್ಷಿಣ ವಲಯವು, ನಾಲ್ಕನೇ ದಿನ 336 ರನ್ಗಳಿಗೆ ಆಲೌಟ್ ಆಯಿತು. ನಾಯಕ ತಿಲಕ್ ವರ್ಮಾ 99 ರನ್ಗೆ ವಿಕೆಟ್ ಒಪ್ಪಿಸಿದರು. ಮುಕೇಶ್ ಕುಮಾರ್ 3, ಮೊಹಮ್ಮದ್ ಶಮಿ ಹಾಗೂ ಶಿಖರ್ ಮೋಹನ್ 2 ವಿಕೆಟ್ ಪಡೆದರು.ಎರಡನೇ ಇನಿಂಗ್ಸ್ ಆರಂಭಿಸಿದ ಪೂರ್ವ ವಲಯವು ಆರಂಭಿಕ ಆಘಾತ ಅನುಭವಿಸಿತು. ಯುವ ತಾರೆ ವೈಭವ್ ಸೂರ್ಯವಂಶಿ(8 ರನ್), ಅಭಿಮನ್ಯು ಈಶ್ವರನ್(3 ರನ್) ಹೆಚ್ಚುಹೊತ್ತು
ಕ್ರೀಸ್ನಲ್ಲಿ ನಿಲ್ಲಲಿಲ್ಲ.ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಶಿಖರ್ ಮೋಹನ್(52 ರನ್), ನಾಯಕ ಇಶಾನ್ ಕಿಶನ್(80 ರನ್) 126 ರನ್ ಜೊತೆಯಾಟವಾಡುವ ಮೂಲಕ ಪೂರ್ವ ವಲಯ ತಂಡವನ್ನು ಬ್ಯಾಟಿಂಗ್ ಕುಸಿತದಿಂದ ಪಾರುಮಾಡಿದರು. ಕುಮಾರ್ ಕುಶಾಗ್ರ(ಅಜೇಯ 34 ರನ್) ಹಾಗೂ ಮೊಹಮ್ಮದ್ ಖುರೇಷಿ(26 ರನ್) ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.









