ಸುಳ್ಯ:ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕೆ ಪಿ ಎಸ್ ಸ್ಕೂಲ್ ಗಾಂಧಿನಗರ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ಫುಟ್ಬಾಲ್ ಪಂದ್ಯಾಟ ಗಾಂಧಿನಗರ ಕ್ರೀಡಾoಗಣ ದಲ್ಲಿ ನಡೆಯಿತು. ಬಾಲಕರ ವಿಭಾಗದಲ್ಲಿ
ಗ್ರೀನ್ ವ್ಯೂ ಪ್ರೌಢ ಶಾಲೆ ಪ್ರಥಮ ಹಾಗು ಸೈoಟ್ ಜೋಸೆಫ್ ಪ್ರೌಢ ದ್ವಿತೀಯ ಸ್ಥಾನ ಪಡೆಯಿತು.ಬಾಲಕಿಯರ ವಿಭಾಗದಲ್ಲಿ ಕೆ ಪಿ ಎಸ್ ಸುಳ್ಯ ಪ್ರೌಢಶಾಲೆ ಪ್ರಥಮ ಹಾಗು ಕೆಪಿಎಸ್ ಗಾಂಧಿನಗರ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಎಂ.ಮುಸ್ತಫ ಬಹುಮಾನ ವಿತರಿಸಿದರು. ಕೆಪಿಎಸ್ ಗಾಂಧಿನಗರ ಎಸ್ಡಿಎಂಸಿ ಉಪಾಧ್ಯಕ್ಷ ಚಿದಾನಂದ ಕಾಯರ್ತೋಡಿ ಅಧ್ಯಕ್ಷತೆ ವಹಿಸಿದ್ದರು.ಪ್ರಮುಖರಾದ ಶರೀಫ್ ಕಂಠಿ,
ಕೆಪಿಎಸ್ ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ,
ಪದವಿ ಪೂರ್ವ ವಿಭಾಗದ ಪ್ರಾoಶುಪಾಲೆ, ಪರಮೇಶ್ವರಿ, ಪ್ರೌಢ ಶಾಲಾ ವಿಭಾಗ ಜ್ಯೋತಿ ಲಕ್ಷ್ಮಿ, ಪ್ರಾಥಮಿಕ ವಿಭಾಗದ ಮುಖ್ಯ್ಯೊಪಾಧ್ಯಾಯಿನಿ, ಅಶ್ವಿನಿ, ಪ್ರೌಢ ಶಾಲಾ ವಿಭಾಗ ಶಾರೀರಿಕ ಶಿಕ್ಷಣ ಶಿಕ್ಷಕಿ ಪದ್ಮಿನಿ, ಪ್ರಾಥಮಿಕ ವಿಭಾಗದ ಪಿಇಟಿ ಕಲ್ಪಲತ, ಭವಾನಿ ಮೇಡಂ, ಗ್ರೀನ್ ವ್ಯೂ ಪ್ರೌಢ ಶಾಲೆ ಹೆಚ್ ಎಂ ಇಲ್ಯಾಸ್ ಕಾಶಿಪಟ್ಟಣ, ಅಶ್ರಫ್ ಗುರುoಪು ಮೊದಲಾದವರು ಉಪಸ್ಥಿತರಿದ್ದರು.ವಿಷ್ಣು ನಾರ್ಕೋಡ್ ಕಾರ್ಯಕ್ರಮ ನಿರೂಪಿಸಿದರು.









