ನವದೆಹಲಿ: ಮುಂಬರುವ ಆಸ್ಟ್ರೇಲಿಯಾ ‘ಎ’ ವಿರುದ್ಧದ ಏಕದಿನ ಹಾಗೂ ಟೆಸ್ಟ್ ಸರಣಿಗೆ ಭಾರತ ‘ಎ’ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಏಕದಿನ ಸರಣಿಯಲ್ಲಿ ಋತುರಾಜ್ ಗಾಯಕವಾಡ್ ತಂಡವನ್ನು ಮುನ್ನಡೆಸಿದರೆ, ಟೆಸ್ಟ್ ಸರಣಿಗೆ ಕನ್ನಡಿಗ ದೇವದತ್ತ ಪಡಿಕ್ಕಲ್ ನಾಯಕರಾಗಿದ್ದಾರೆ.
ಗಾಯದ ಸಮಸ್ಯೆಯಿಂದ ಕಳೆದ ಕೆಲವು ತಿಂಗಳುಗಳಿಂದ
ಭಾರತ ತಂಡದಿಂದ ದೂರ ಉಳಿದಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬರುವ ಆಸ್ಟ್ರೇಲಿಯಾ ‘ಎ’ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಆದರೆ, ಅವರ ಲಭ್ಯತೆಯು ಫಿಟ್ನೆಸ್ ಅನ್ನು ಅವಲಂಬಿಸಿರುತ್ತದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.
ಭಾರತ ಎ ತಂಡವು ಆಸ್ಟ್ರೇಲಿಯಾ ಎ ವಿರುದ್ಧ ಅಕ್ಟೋಬರ್ 6ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಸರಣಿಯಲ್ಲಿ ಭಾರತ ತಂಡವನ್ನು ಋತುರಾಜ್ ಗಾಯಕವಾಡ್ ಮುನ್ನಡೆಸಲಿದ್ದಾರೆ.
ಕರ್ನಾಟಕದ ಯುವ ಬ್ಯಾಟರ್ ದೇವದತ್ತ ಪಡಿಕ್ಕಲ್ ಏಕದಿನ ತಂಡಕ್ಕೆ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಜೊತೆಗೆ ಟೆಸ್ಟ್ ಸರಣಿಯಲ್ಲಿ ಭಾರತ ಎ ತಂಡವನ್ನು ಮುನ್ನಡೆಸಲಿದ್ದಾರೆ. ಟೆಸ್ಟ್
ಸೆಪ್ಟೆಂಬರ್ 22 ರಿಂದ ಮತ್ತು ಅಕ್ಟೋಬರ್ 2 ರಿಂದ ಆರಂಭವಾಗಲಿದೆ
ಏಕದಿನ ಸರಣಿ ಅಕ್ಟೋಬರ್ 6, 9 ಮತ್ತು 11ರಂದು ನಡೆಯಲಿದೆ.
ಭಾರತ ‘ಎ’ ಏಕದಿನ ತಂಡ:
ಋತುರಾಜ್ ಗಾಯಕವಾಡ್ (ನಾಯಕ), ದೇವದತ್ತ ಪಡಿಕ್ಕಲ್ (ಉಪನಾಯಕ), ಪ್ರಿಯಾಂಶ್ ಆರ್ಯ, ಸಾಯಿ ಸುದರ್ಶನ್, ರಜತ್ ಪಾಟಿದಾರ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ನಿಶಾಂತ್ ಸಿಂಧು, ವಿಪ್ರಾಜ್ ನಿಗಮ್, ಅರ್ಶಿನ್ ಕುಲಕರ್ಣಿ, ಅರ್ಷದ್ ಖಾನ್, ನಮನ್ ಧೀರ್, ಹಾರ್ದಿಕ್ ಪಾಂಡ್ಯ (ಫಿಟ್ನೆಸ್ ಆಧಾರಿತವಾಗಿರಲಿದೆ), ಪ್ರಭ್ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ಗುರ್ಜಪ್ನೀತ್ ಸಿಂಗ್, ಯಶ್ ಠಾಕೂರ್ ಸ್ಥಾನ ಪಡೆದಿದ್ದಾರೆ.
ಟೆಸ್ಟ್ ಸರಣಿಗೆ ಭಾರತ ‘ಎ’ ತಂಡ:
ಅಮನ್ ಮೊಖಡೆ, ಆಯುಷ್ ಪಾಂಡೆ, ದೇವದತ್ತ ಪಡಿಕ್ಕಲ್ (ನಾಯಕ), ಸಾಯಿ ಸುದರ್ಶನ್ (ಉಪನಾಯಕ), ಯಶ್ ರಾಥೋಡ್, ಶೇಕ್ ರಶೀದ್, ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್) ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಅನ್ಶುಲ್ ಕಾಂಬೋಜ್, ಪ್ರಫುಲ್ ಹಿಂಗೆ, ಎನ್ ಜಗದೀಸನ್ (ವಿಕೆಟ್ ಕೀಪರ್), ನಾಚಿಕೇತ್ ಬ್ಲೂಟೆ, ವಿಜಯಕುಮಾರ್ ವೈಶಾಕ್









