ಸುಳ್ಯ: ಬಿಜೆಪಿ ಸುಳ್ಯ ಮಂಡಲದ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತದ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಅ. 12 ರಿಂದ ಸುಳ್ಯ ತಾಲೂಕಿನಾದ್ಯಂತ ಬೀದಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.’ವಿಶ್ವ ನಾಯಕ ನರೇಂದ್ರ ಮೋದಿ’ ನಾಟಕದ ರಚನೆಯನ್ನು
ಕುಸುಮಾಧರ ಎ.ಟಿ ಅವರು ಮಾಡಿದ್ದಾರೆ. ಕುಸುಮಾಧರ ಎ.ಟಿ. ಮತ್ತುರಾಜ್ ಮುಖೇಶ್ ಸುಳ್ಯ ಅವರು ನಿರ್ದೇಶನ ಮಾಡಿದ್ದಾರೆ. ಹಾಡುಗಳ ಸಂಯೋಜನೆಯನ್ನು ರಾಜ್ ಮುಖೇಶ್ ಅವರು ಮಾಡಿದ್ದಾರೆ.ನಾಟಕದಲ್ಲಿ ಕುಸುಮಾಧರ ಎ.ಟಿ., ರಾಜ್ ಮುಖೇಶ್ ಸುಳ್ಯ, ಪುಷ್ಪರಾಜ್, ನಾರಾಯಣ ಎಸ್.ಎಂ., ಕೇಶವ ಮಾಸ್ಟರ್, ಚಿದಾನಂದ ವಿದ್ಯಾನಗರ, ಚಿನ್ಮಯಿ,ದುಷ್ಯಂತ್ ಕೆ ಸೇರಿದಂತೆ ಹಲವು ಕಲಾವಿದರು ಅಭಿನಯಿಸಲಿದ್ದಾರೆ.
ಮೋದಿ ಅವರ ನಾಯಕತ್ವ, ವಿಕಸಿತ ಭಾರತದ ಕನಸು ಮತ್ತು ಸೇವಾ ಕಾರ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಈ ಬೀದಿ ನಾಟಕವನ್ನು ಆಯೋಜಿಸಲಾಗಿದೆ ಎಂದು ಸುಳ್ಯ ಮಂಡಲದ ಪ್ರಕಟಣೆ ತಿಳಿಸಿದೆ.








