ಸುಳ್ಯ:ಸುಳ್ಯದ ರಂಗಮಯೂರಿ ಕಲಾಶಾಲೆ, ಪ್ರಣವ ಸೌಹಾರ್ದ ಸಹಕಾರಿ ಸಂಘ, ಮತ್ತು ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಕಸಿತ ಭಾರತದ ಕಡೆ ಮಕ್ಕಳ ನಡೆ ಎಂಬ ಧೈಯದೊಂದಿಗೆ ಸುಳ್ಯದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಸಂಕಲ್ಪ ಮಕ್ಕಳ ಹಬ್ಬದ ಎರಡನೇ ದಿನ ಅ.10ರಂದು ವಿವಿಧ ಶೈಕ್ಷಣಿಕ ಗೋಷ್ಠಿಗಳು ಹಾಗು
ಮಾತೃ ಸಂಗಮ ಕಾರ್ಯಕ್ರಮ ನಡೆಯಿತು. ಸರಕಾರಿ ಆಡಳಿತ ಹುದ್ದೆಗಳ ಮಾಹಿತಿ:ಅಗತ್ಯತೆ ಮತ್ತು ಅವಶ್ಯಕತೆ ವಿಷಯದ ಕುರಿತುವಿಚಾರ ಗೋಷ್ಠಿಯಲ್ಲಿ ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೆಶಕ ಭಾಗ್ಯಶ್ ರೈ ವಿಚಾರ ಮಂಡಿಸಿದರು.
ಮಕ್ಕಳ ಬೆಳವಣಿಗೆಯಲ್ಲಿ ಶಾಲೆ ಮತ್ತು ಮನೆಯ ವಾತಾವರಣ ವಿಷಯದ ವಿಚಾರಗೋಷ್ಠಿಯಲ್ಲಿ ಶಿಕ್ಷಣ ತಜ್ಞ ಹಾಗೂ ಸಾಹಿತಿ ಅರವಿಂದ ಚೊಕ್ಕಾಡಿ ವಿಚಾರ ಮಂಡಿಸಿದರು. ಮಕ್ಕಳ ಹಕ್ಕುಗಳು ಹಾಗೂ ಕಾನೂನು ಅರಿವು ವಿಷಯದ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ ಹಿರಿಯ ವಕೀಲ ಎಂ. ವೆಂಕಪ್ಪ ಗೌಡ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಪೋಷಕರಿಗಾಗಿ

ವಿನೂತನ ಕಾರ್ಯಗಾರ ಮಾತೃ ಸಂಗಮ ಮಾಲಿಕೆಯಡಿ
ಮಕ್ಕಳ ಬೌದ್ಧಿಕ ಬೆಳವಣಿಗೆಯಲ್ಲಿ ಶಾಲೆ ಮತ್ತು ಪೋಷಕರ ಪಾತ್ರ ಎಂಬ ವಿಷಯದಲ್ಲಿ ಮಂಗಳೂರಿನ ಅಟೋಮೇಷನ್ ಕ್ಲೌಡ್ ಸೊಲ್ಯೂಷನ್ನ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ರಾಮ್ ಮಾಹಿತಿ ನೀಡಿದರು.ಬಳಿಕ ಎ.ಐ. . ತಂತ್ರಜ್ಞಾನ ಸಮಾಜ ಮತ್ತು ಸಂಸ್ಕೃತಿಗೆ ಪೂರಕವೇ ಅಥವಾ ಪ್ರ ಮಾರಕವೇ ಎಂಬ ವಿಷಯದ ಕುರಿತು ವಿದ್ಯಾರ್ಥಿ ಚರ್ಚಾಗೋಷ್ಠಿ ನಡೆಯಿತು. ಚಂದ್ರಶೇಖರ ಪೇರಾಲು ಚರ್ಚಾಗೋಷ್ಠಿ ನಿರ್ವಹಿಸಿದರು.ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮದ ಸಂಯೋಜಕರಾದ ಲೋಕೇಶ್ ಊರುಬೈಲು, ರಂಜಿತ್ ಅಡ್ತಲೆ, ಯಶ್ವಿತ್ ಕಾಳಮ್ಮನೆ ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು.








