ಸುಳ್ಯ: ಗುರು ಪೂರ್ಣಿಮೆ ಅಂಗವಾಗಿ ಕನಕಮಜಲು ಕನಕಕಲಾ ಗ್ರಾಮದ ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ನಡೆದ ನೃತ್ಯ ನಮನ ಮನಸೂರೆಗೊಂಡಿತು. ಭರತನಾಟ್ಯ ಗುರು ಡಾ.ಚೇತನ ರಾಧಾಕೃಷ್ಣ ಅವರ ಶಿಷ್ಯರಿಂದ ನಡೆದ ನೃತ್ಯನಮನ ಹಾಗೂ ಭರತನಾಟ್ಯ ವೈಭವ ನೋಡುಗರ ಮನ ಗೆದ್ದಿತು.ಅಕಾಡೆಮಿ ವತಿಯಿಂದ
ಗುರು ಪೂರ್ಣಮಾ ಆಚರಣೆ, ನೃತ್ಯ ನಮನ ಹಾಗು ಅಗಲಿದ ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ಅವರ ಸಂಸ್ಮರಣಾ ಕಾರ್ಯಕ್ರಮ ಆ.11ರಂದು ಕನಕಮಜಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಕನಕ ಸೌಧ ಸಭಾಂಗಣದಲ್ಲಿ ನಡೆಯಿತು.ಡಾ.ಚೇತನ ರಾಧಾಕೃಷ್ಣ ಅವರ ಶಿಷ್ಯರಾದ

ಪೂರ್ವಿಕ, ಶಮಿತ ಅವರ ನೇತೃತ್ವದಲ್ಲಿ ಮಂಡ್ಯ,ಮೈಸೂರು ಮತ್ತು ಕನಕಮಜಲು ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ನ ಕಲಾ ನಿರ್ದೇಶಕಿ ಡಾ.ಚೇತನ ರಾಧಾಕೃಷ್ಣ ನಿರ್ದೇಶನದಲ್ಲಿ ನೃತ್ಯ ಕಾರ್ಯಕ್ರಮ ನಡೆಯಿತು.






























