ಬನಾರಿ:ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕಿರೀಕ್ಕಾಡು ಸ್ಮಾರಕ ಸಭಾಭವನದಲ್ಲಿ ಶರಸೇತುಬಂಧ’ಯಕ್ಷಗಾನ ತಾಳಮದ್ದಳೆ ಜರಗಿತು.ಸ್ಥಳ ಸಾನಿಧ್ಯ ಶ್ರೀ ಗೋಪಾಲಕೃಷ್ಣ ದೇವರ ಪೂಜೆ ಭಗವದ್ಗೀತೆ ಪಾರಾಯಣ ನೆರವೇರಿದ ಬಳಿಕ ಯಕ್ಷಗಾನ
ತಾಳಮದ್ದಳೆ ಯಕ್ಷಗುರು ವಿಶ್ವವಿನೋದ ಬನಾರಿ ಅವರ ಮಾರ್ಗದರ್ಶನದಲ್ಲಿ ಮುಂದುವರಿಯಿತು. ಭಾಗವತರಾಗಿ ನಿತೀಶ್ ಕುಮಾರ್ ಎಂಕಣ್ಣಮೂಲೆ ಹಾಗೂ ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ ಅವರು ಭಾಗವಹಿಸಿದ್ದರು.ಚೆಂಡೆ ಮದ್ದಳೆ ವಾದಕರಾಗಿ ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ಶ್ರೀಧರ ಆಚಾರ್ಯ ಈಶ್ವರಮಂಗಲ, ವಿಷ್ಣು ಶರಣ ಬನಾರಿ,ಶ್ರೀದೇವ್ ಈಶ್ವರಮಂಗಲ, ಅರ್ಥದಾರಿಗಳಾಗಿ ಕೀರಿಕ್ಕಾಡು ಗಣೇಶ ಶರ್ಮ, ರಾಮಣ್ಣ ಮಾಸ್ತರ್ ದೇಲಂಪಾಡಿ, ಬೆಳ್ಳಿಪ್ಪಾಡಿ ಹಳೆಮನೆ ವೆಂಕಪ್ಪ ಗೌಡ ಸಹಕರಿಸಿದರು.
ಶಶಿಕಲಾ ಜಿ. ಭಟ್ ಅವರಿಂದ ಸೇವಾರೂಪವಾಗಿ ನಡೆಸಲ್ಪಟ್ಟ ಈ ಕಲಾ ಕಾರ್ಯಕ್ರಮದ ಮೊದಲಿಗೆ ಇತ್ತೀಚೆಗೆ ನಿಧನರಾದ ಹಿರಿಯ ಕಲಾ ಚೇತನ ಕೆ. ಸಿ. ಪಾಟಾಳಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈಶ್ವರಿ ಪೆರುಂಬಾರು, ನಂದಕಿಶೋರ ಬನಾರಿ, ಶಾಂತಕುಮಾರಿ ಚೆಂಡೆಮೂಲೆ, ಪೂರ್ಣಿಮಾ ಬನಾರಿ ಅವರ ನಿರೂಪಣೆ ಸಹಕಾರದೊಂದಿಗೆ ಜರಗಿದ ಕಾರ್ಯಕ್ರಮದ ವಿಷ್ಣುಕೀರ್ತಿ ಬನಾರಿ ವಂದಿಸಿದರು.







