ಚಿತ್ರಗಳು:ದಯಾ ಕುಕ್ಕಾಜೆ.
ಮಂಗಳೂರು: ಮಂಗಳೂರಿಗೆ ‘ಬಾದ್ಶಾ’ ಶಾರುಖ್ ಖಾನ್ ಆಗಮಿಸಿದ್ದಾರೆ.ಇಂದು ಕರಾವಳಿ ನಗರಿ ಮಂಗಳೂರಿಗೆ ಆಗಮಿಸಿದ ಅವರು ಮಿಂಚಿನ ಸಂಚಾರ ನಡೆಸಿದ್ದಾರೆ. ಮಂಗಳೂರಿಗೆ ಆಗಮಿಸುವ ಮೂಲಕ ಕರಾವಳಿಯ ಅಭಿಮಾನಿಗಳಲ್ಲಿ ಹೊಸ ಸಂಚಲನ ಸೃಷ್ಠಿಸಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ
ವಿಮಾನದ ಮೂಲಕ ಶಾರುಖ್ ಖಾನ್ ಅವರು ಬಂದಿಳಿದರು. ವಿಮಾನ ನಿಲ್ದಾಣದ ಹೊರಗೆ ತಮ್ಮ ನೆಚ್ಚಿನ ನಟನನ್ನು ನೋಟ ನೋಡಲು ಅಭಿಮಾನಿಗಳ ದಂಡೇ ನೆರೆದಿತ್ತು. ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಶಾರುಖ್ ತಮ್ಮ ಎಂದಿನ ಶೈಲಿಯ ಮಗುಳ್ನಗೆಯೊಂದಿಗೆ ಅಭಿಮಾನಿಗಳತ್ತ ಕೈಬೀಸಿದರು.ಮಂಗಳೂರಿನ ಖ್ಯಾತ ಸಂಸ್ಥೆಯಾದ

‘ರೋಹನ್ ಕಾರ್ಪೊರೇಷನ್’ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವರು ಆಗಮಿಸಿದ್ದಾರೆ. “ಆನ್ ಇವನಿಂಗ್ ವಿತ್ ಶಾರುಖ್ ಖಾನ್” ಎಂಬ ಈ ವಿಶೇಷ ಸಮಾರಂಭವು ಮಂಗಳೂರಿನ ಅಡ್ಯಾರು ಗಾರ್ಡನ್ನಲ್ಲಿ ನಡೆಯಲಿದೆ.
ಶಾರುಖ್ ಖಾನ್ ಅವರ ಭೇಟಿಯಿಂದಾಗಿ ಅಡ್ಯಾರು ಗಾರ್ಡನ್ ಸುತ್ತಮುತ್ತ ಹಬ್ಬದ ವಾತಾವರಣ ನಿರ್ಮಾಣವಾಗಿದೆ.






