ಸುಳ್ಯ:ರಂಗ ಮಯೂರಿ ಕಲಾಶಾಲೆ ಸುಳ್ಯ ವತಿಯಿಂದ ವಿವಿಧ ಸಂಘ ಸಂಘ ಸಂಸ್ಥೆಗಳ ಸಹಯೋಗದಲ್ಲಿ‘ಭೃಗು ಶಾಪ’ ಯಕ್ಷಗಾನ ತಾಳಮದ್ದಳೆ ರಂಗ ಮಯೂರಿ ಕಲಾಶಾಲೆಯಲ್ಲಿ ನಡೆಯಿತು.
ಖ್ಯಾತ ಕವಿ ಶ್ರೀಧರ ಡಿ.ಎಸ್. ಅವರ ಕೃತಿಯಾದ ಭೃಗು ಶಾಪ ಪ್ರಸಂಗವನ್ನು ಆಧರಿಸಿದ ತಾಳಮದ್ದಳೆಯಲ್ಲಿ
ಸುಬ್ರಾಯ ಸಂಪಾಜೆ ಭಾಗವತಿಕೆಯನ್ನು ನಿರ್ವಹಿಸಿದರು. ಶ್ರೀಧರ ಪಡ್ರೆ ಮದ್ದಳೆ ಹಾಗೂ ವೇಣು ಮಾಂಬಾಡಿ ಚೆಂಡೆ ವಾದನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಅರ್ಥಧಾರಿಗಳಾಗಿ ಜಬ್ಬಾರ್ ಸಮೊ ಸಂಪಾಜೆ (ದೇವೇಂದ್ರ), ದಿನೇಶ್ ಶೆಟ್ಟಿ, ಕಾವಳಕಟ್ಟೆ (ಖ್ಯಾತಿ), ಪ್ರಸಾದ್ ಭಟ್ಕಳ (ವಿಷ್ಣು), ಜಯಾನಂದ ಸಂಪಾಜೆ (ಭೃಗು) ಹಾಗೂ ಜಯಪ್ರಕಾಶ ಗುಂಡಿ (ತಮಾಸುರ) ಪಾತ್ರ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್ ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಸುಳ್ಯ ಅಧ್ಯಕ್ಷ ವಿನೋದ್ ಲಸ್ರಾದೋ, ಸಂದ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷ ರಾಮಚಂದ್ರ ಪಲ್ಲತ್ತಡ್ಕ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ಜೇಸಿಐ ಪಯಸ್ವಿನಿ ಅಧ್ಯಕ್ಷೆ ಲತಾ ಸುಪ್ರೀತ್ ಮೋಂಟಡ್ಕ, ಜೇಸಿಐ ಸುಳ್ಯ ಸಿಟಿ ಅಧ್ಯಕ್ಷೆ ನಾಗವೇಣಿ ದಾಮೋದರ, ಮಧುಸೂದನ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ರಂಗ ಮಯೂರಿ ಕಲಾಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.








