ಸುಳ್ಯ:ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ಸೇವಾ ರೂಪದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡುವ ಬೆಳ್ಳಿರಥ ಬುಧವಾರ ಸಂಜೆ ಸುಬ್ರಹ್ಮಣ್ಯ ಪುರ ಪ್ರವೇಶ ಮಾಡಿತು. ರಥಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು,ಸದಸ್ಯರು ಹಾಗೂ ಭಕ್ತರು ಸೇರಿದಂತೆ ನೂರಾರು ಮಂದಿ ಸೇರಿ ಸ್ವಾಗತ ಕೋರಿದರು. ಬೆಳಿಗ್ಗೆ ಸುಳ್ಯದಿಂದ ಹೊರಟ
ರಥ ವೈಭವದ ಮೆರವಣಿಗೆ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಿತು. ಸುಳ್ಯ ಕೆವಿಜಿ ವೃತ್ತದ ಬಳಿಯದ ಹೊರಟ ರಥಯಾತ್ರೆಗೆ ವಿವಿಧ ಕಡೆಗಳಲ್ಲಿ ಭಕ್ತಿ ಸಂಭ್ರಮದ ಸ್ವಾಗತ ನೀಡಲಾಯಿತು. ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಿ ದಾರಿಯುದ್ದಕ್ಕೂ ಸ್ವಾಗತ ನೀಡಲಾಯಿತು. ಸಂಜೆ ಸುಬ್ರಹ್ಮಣ್ಯ ಪುರ ಪ್ರವೇಶ ಮಾಡಿದ ರಥಕ್ಕೆ ಅದ್ದೂರಿ ಸ್ವಾಗತ ನೀಡಲಾಯಿತು.
ಡಾ.ರೇಣುಕಾಪ್ರಸಾದ್ ಕೆ.ವಿ, ಡಾ.ಜ್ಯೋತಿ ಆರ್.ಪ್ರಸಾದ್, ಡಾ.ಅಭಿಜ್ಞಾ, ಮೌರ್ಯ ಆರ್.ಕುರುಂಜಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ,ಪ್ರಮುಖರಾದ
ನಿತ್ಯಾನಂದ ಮುಂಡೋಡಿ, ಎನ್.ಎ.ರಾಮಚಂದ್ರ,
ಭರತ್ ಮುಂಡೋಡಿ, ಎಸ್.ಎನ್ ಮನ್ಮಥ, ಪಿ.ಸಿ.ಜಯರಾಮ, ಹರೀಶ್ ಕಂಜಿಪಿಲಿ,ಎ.ವಿ.ತೀರ್ಥರಾಮ, ಜಾಕೆ ಮಾಧವ ಗೌಡ, ವೆಂಕಟ್ ದಂಬೆಕೋಡಿ, ಚಂದ್ರ ಕೋಲ್ಚಾರ್, ಸಂತೋಷ್ ಜಾಕೆ,
ಭವಾನಿಶಂಕರ ಅಡ್ತಲೆ, ಮಾಧವ ಬಿ.ಟಿ. ದಿನೇಶ್ ಮಡ್ತಿಲ, ಪ್ರಸನ್ನ ಕಲ್ಲಾಜೆ ಕಮಲಾಕ್ಷ ನಂಗಾರು , ಡಾ.ಮನೋಜ್ , ಸಂತೋಷ್ ಕುತ್ತಮೊಟ್ಟೆ, ಮೋಹನ್ ರಾಮ್ ಸುಳ್ಳಿ, ಶಾಫಿ ಕುತ್ತಮೊಟ್ಟೆ , ರಾಜು ಪಂಡಿತ್ ,ಸುಪ್ರೀತ್ ಮೊಂಟಡ್ಕ, ಎಂ ವೆಂಕಪ್ಪ ಗೌಡ
ಕೆವಿಜಿ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಸಿಬ್ಬಂದಿಗಳು ಸೇರಿ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಬೆಳ್ಳಿರಥವನ್ನು ನ.10ರಂದು ಶಾಸ್ತ್ರೋಕ್ತವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡಲಾಗುತ್ತದೆ.















