ಬಂದಡ್ಕ:ಗಡಿ ಗ್ರಾಮ ಬಂದಡ್ಕದ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಧ್ವಜರೋಹಣದ ಮೂಲಕ ಆರಂಭಗೊಂಡಿತು. ಬೆಳಿಗ್ಗೆ ಹಸಿರುವಾಣಿ ಸಮರ್ಪಣಾ ಮೆರವಣಿಗೆ ನಡೆಯಿತು. ಚೆಂಡೆ, ವಾದ್ಯ ಮೇಳಗಳ ಆಕರ್ಷಕ ಮೆರವಣಿಗೆಯ ಮೂಲಕ ಹಸಿರುವಾಣಿ ಸಮರ್ಪಸಲಾಯಿತು. ಬಳಿಕ

ಧ್ವಜಾರೋಹಣ ನಡೆಯಿತು.
ಫೆ.5ರಿಂದ 9ರ ತನಕ ಬ್ರಹ್ಮಶ್ರೀ ಇರಿವಲ್ ಕೇಶವ ತಂತ್ರಿ ಅವರ ನೇತೃತ್ವದಲ್ಲಿ ಜಾತ್ರೋತ್ಸವ ನಡೆಯಲಿದ್ದು. ವಿವಿಧ ವೈದಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 5 ದಿನಗಳ ಜಾತ್ರಾ ಮಹೋತ್ಸವ ನಡೆಯಲಿದೆ. ಫೆ.5ರಂದು ಬೆಳಿಗ್ಗೆ 7ಕ್ಕೆ ಗಣಪತಿಹೋಮ, ಉಷಃಪೂಜೆ ನಡೆದು ಬೆಳಿಗ್ಗೆ 8ಕ್ಕೆ ಉಗ್ರಾಣ ತುಂಬಿಸಲಾಯಿತು. 8 ರಿಂದ ಸಂಜೆ ಗಂಟೆ 5 ವರೆಗೆ ಭಾಗವತ ಪಾರಾಯಣ ನಡೆಯಿತು. ಮಧ್ಯಾಹ್ನ

12ಕ್ಕೆ ಮಹಾಪೂಜೆ, ಕಲಾಶಾಭಿಷೇಕ
ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ಸಂಜೆ 6ರಿಂದ ನೃತ್ಯ ಭಜನೆ,
ತಿರುವಾದಿರ, ನೃತ್ಯ ವೈವಿಧ್ಯ, ಗಾನಾರ್ಚನೆ,ನೃತ್ಯನೃತ್ಯಾದಿಗಳು ನಡೆಯಿತು. ರಾತ್ರಿ 7.30ಕ್ಕೆ ರಾತ್ರಿಪೂಜೆ 8ಕ್ಕೆ ಶ್ರೀ ಭೂತಬಲಿ ನಡೆಯಿತು.