ಸುಳ್ಯ:ಸುಳ್ಯದ ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾಗಿ ಪಿ.ಎಸ್.ಗಂಗಾಧರ ಆಯ್ಕೆಯಾಗಿದ್ದಾರೆ. ಕೊಡಿಯಾಲಬೈಲು ಗೌಡರ ಸಮುದಾಯ ಭವನದಲ್ಲಿ ನಡೆದ ಗೌಡರ ಯುವ ಸೇವಾ ಸಂಘದ ಮಹಾಸಭೆಯ ಬಳಿಕ ನಿರ್ದೇಶಕರ ಸಭೆಯಲ್ಲಿ
ಅಧ್ಯಕ್ಷರ ಆಯ್ಕೆ ನಡೆಯಿತು.ಪ್ರಧಾನ ಕಾರ್ಯದರ್ಶಿ ಯಾಗಿ ತೀರ್ಥರಾಮ ಅಡ್ಕಬಳೆ, ಕೋಶಾಧಿಕಾರಿ ದಿನೇಶ್ ಮಡ್ತಿಲ, ಆಯ್ಕೆಯಾದರು. ಎಂ.ಜಿ.ಎಂ. ಶಾಲಾ ಸಂಚಾಲಕರಾಗಿ ದೊಡ್ಡಣ್ಣ ಬರೆಮೇಲು ಪುನರಾಯ್ಕೆಯಾದರು. ಗೌಡರ ಯುವ ಸೇವಾ ಸಂಘದ ಆರಂಭದಿಂದಲೂ ಸಕ್ರೀಯರಾಗಿದ್ದ ಪಿ.ಎಸ್.ಗಂಗಾಧರ ಅವರು ಸಂಘದದಲ್ಲಿ ವಿವಿಧ ಹುದ್ದೆಗಳನ್ನು ವಹಿಸಿ ಇದೀಗ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಬರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಆಗಿರುವ ಸಂದರ್ಭದಲ್ಲಿ ಕೊಡಿಯಾಲಬೈಲಿನಲ್ಲಿ ಸಂಘಕ್ಕೆ ನಿವೇಶನ ಒದಗಿಸಲು ಪೂರ್ಣ ಸಹಕಾರ ನೀಡಿದ್ದರು.