ಸುಳ್ಯ:ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ವತಿಯಿಂದ ಧಾರವಾಡ ಆರ್.ಎನ್ ಶೆಟ್ಟಿ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 8ನೇ ಅಂತರ್ ಕಾಲೇಜು ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಸುಳ್ಯದ ಕೆ.ವಿ.ಜಿ. ಕಾನೂನು ಕಾಲೇಜಿನ ಕ್ರೀಡಾಪಟುಗಳು ಪಾರಮ್ಯ ಮೆರೆದಿದ್ದಾರೆ.
ವಿದ್ಯಾರ್ಥಿಗಳಾದ
ಲಾವಣ್ಯ. ಎನ್ ೫೦೦೦ ಮೀ ಓಟದಲ್ಲಿ ಪ್ರಥಮ, ವನ್ಯಶ್ರೀ. ಕೆ.ಎಚ್. ೧೦೦ ಮೀ ಓಟದಲ್ಲಿ ದ್ವಿತೀಯ ಹಾಗೂ ೨೦೦ ಮೀ ಓಟದಲ್ಲಿ ದ್ವಿತೀಯ, ರಕ್ಷಿತ್ ಕುಮಾರ್ ಐ.ಪಿ. ೧೦೦ ಮೀ ಓಟದಲ್ಲಿ ದ್ವಿತೀಯ, ಬ್ರಿಜೇಶ್.ಎಮ್ ತ್ರಿವಿಧ ಜಿಗಿತದಲ್ಲಿ ಚತುರ್ಥ ಸ್ಥಾನಗಳಿಸಿರುತ್ತಾರೆ.
ಕೆ.ವಿ.ಜಿ. ಕಾಲೇಜಿನ ದೈಹಿಕ ನಿರ್ದೇಶಕರಾದ ಮಿಥನ್. ಎಸ್ ಇವರು ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದು ಅಲ್ಲದೇ ಕ್ರೀಡಾ ವ್ಯವಸ್ಥಾಪಕರಿಗೆ ಆಯೋಜಿಸಿದ್ದ ಪುರುಷರ ವಿಭಾಗದ ೧೦೦ ಮೀ ಓಟ(೪೫ ವರ್ಷಕ್ಕಿಂತ ಕೆಳಗಿನವರು)ದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಸಂಸ್ಥೆಯ ದೈಹಿಕ ದೈಹಿಕ ನಿರ್ದೇಶಕರಾದ ಮಿಥನ್. ಎಸ್ ಹಾಗೂ ಸಾಧನೆ ಗೈದ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.