ಕಲ್ಲುಗುಂಡಿ: ಮನೆಯ ಹಿಂಭಾಗದ ತಡೆಗೋಡೆಯೊಂದು ಕುಸಿದು ಮನೆಯ ಮೇಲೆ ಬಿದ್ದು ಮನೆಗೆ ಹಾನಿಯಾದ ಘಟನೆ ಸಂಪಾಜೆ ಗ್ರಾಮದ ದಂಡಕಜೆಯಲ್ಲಿ ನಡೆದಿದೆ. ಅವಘಡದಲ್ಲಿ ಮನೆಯ ಅಡುಗೆ ಕೋಣೆಗೆ ಸಂಪೂರ್ಣ
ಹಾನಿಯಾಗಿದ್ದು ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಸಂಪಾಜೆ ದಂಡಕಜೆ ನಿವಾಸಿ ಮಧುಸೂಧನ ಎಂಬವರ ಮನೆಗೆ ಹಾನಿಯಾಗಿದೆ. ಭಾರೀ ಮಳೆಗೆ ಮನೆಯ ಹಿಂಬದಿಯ ತಡೆಗೋಡೆ ಕುಸಿತಗೊಂಡು ಮನೆಯ ಮೇಲೆ ಬಿದ್ದಿದ್ದು ಅಡುಗೆ ಕೋಣೆಗೆ ಸಂಪೂರ್ಣ ಹಾನಿಯಾಗಿದ್ದು ಇತರ ಕೋಣೆಗಳಿಗೂ ಹಾನಿಯಾಗಿದೆ. ಕಲ್ಲು,ಮಣ್ಣು ಕೊಠಡಿಯ ಒಳಗೆ ಬಿದ್ದಿದೆ. ಮನೆಯವರು ಊಟ ಮಾಡಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಜನಪ್ರತಿನಿಧಿಗಳು ಸಾರ್ವಜನಿಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸೋಮವಾರ ಸಂಜೆಯಿಂದ ಸಂಪಾಜೆ ಭಾಗದಲ್ಲಿ ಭಾರೀ ಮಳೆಯಾಗಿದೆ.