ಸುಳ್ಯ:ನಮ್ಮ ಜವನೆರ್ ಜೋಡುಕಲ್ಲು ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅಭಿಮಾನಿ ಬಳಗ , ರೋಟರಿ ಕ್ಲಬ್ ದೇರಳಕಟ್ಟೆ ಮಂಗಳೂರು ಇವರು ಸಹಯೋಗದಲ್ಲಿ ನಡೆದ ಕಯ್ಯಾರ ಕೂಗಿಲೇ ಅಂತರಾಜ್ಯಮಟ್ಟದ ಸಂಗೀತ ಸ್ಪರ್ಧೆಯುಲ್ಲಿ ಸುಳ್ಯದ ಅಶ್ವಿಜ್ ಅತ್ರೇಯನಿಗೆ ದ್ವಿತೀಯ ಪ್ರಶಸ್ತಿ ಲಭಿಸಿದೆ. ಆಡಿಷನ್ ಹಂತದಿಂದ
ಆಯ್ಕೆ ಆದ 8 ಮಂದಿ ಗೆ ಅಂತಿಮ ಹಣಾಹಣಿ ಮೂರು ಸುತ್ತಿನ (ಭಕ್ತಿಗೀತೆ ಮೆಲೋಡಿ ಹಾಡು ಹಾಗೂ ಚಿತ್ರಗೀತೆ ಹಾಡು ಹಾಡು)ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಶ್ವಿಜ್ ಅತ್ರೇಯ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದು ಕಯ್ಯಾರ ಕೋಗಿಲೆ ಬಹುಮಾ ಪಡೆದಿರುತ್ತಾರೆ. ಗಾನಸಿರಿ ಕಲಾ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು ಇವರು ಡಾ. ಕಿರಣಕುಮಾರ್ ಗಾನಸಿರಿ ಹಾಗೂ ಶ್ರೀಲಕ್ಷ್ಮಿ , ಕಾಂಚನ ಈಶ್ವರ ಭಟ್ ಇವರ ಶಿಷ್ಯ. ಸುಳ್ಯದ ರಾಮಚಂದ್ರ ಉಷಾ ದಂಪತಿಗಳ ಪುತ್ರ.