ನಿಶಿನ್: ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಸೆಮಿಫೈನಲ್ನಲ್ಲಿ ಶ್ರೀಲಂಕಾ ವಿರುದ್ದ 124 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಭಾರತ ತಂಡವು ಫೈನಲ್ಗೆ ಲಗ್ಗೆ ಇಟ್ಟಿದೆ.ಇದರೊಂದಿಗೆ ಶನಿವಾರ ನಡೆಯಲಿರುವ ಫೈನಲ್ನಲ್ಲಿ ಚಿನ್ನದ ಪದಕಕ್ಕಾಗಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕದನ ಏರ್ಪಟ್ಟಿದೆ.ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಭಾರತ ಇಶಾನ್ ಕಿಶನ್ (80*) ಹಾಗೂ ವೈಭವ್ ಸೂರ್ಯವಂಶಿ (38) ಅಮೋಘ ಆಟದ ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 169 ರನ್ಗಳ ಸವಾಲಿನ ಮೊತ್ತ ಪೇರಿಸಿತ್ತು.ಈ ಗುರಿ ಬೆನ್ನಟ್ಟಿದ ಲಂಕಾ ಬ್ಯಾಟಿಂಗ್ ಕುಸಿತ ಕಂಡಿತ್ತಲ್ಲದೆ ಕೇವಲ 9.5 ಓವರ್ಗಳಲ್ಲಿ 45 ರನ್ಗಳಿಗೆ ಆಲೌಟ್ ಆಯಿತು.ಭಾರತದ ಪರ ಜಸ್ಪ್ರೀತ್ ಬೂಮ್ರಾ, ಅಕ್ಷರ್ ಪಟೇಲ್ ಹಾಗೂ
ಅಭಿಷೇಕ್ ಶರ್ಮಾ ತಲಾ ಎರಡು ಮತ್ತು ವಾಷ್ಟಿಂಗ್ಟನ್ ಸುಂದರ್ ಒಂದು ವಿಕೆಟ್ ಗಳಿಸಿದರು. ಭಾರತದ ಪರ ಬಿರುಸಿನ ಆಟ ಪ್ರದರ್ಶಿಸಿದ ವೈಭವ್ 21 ಎಸೆತದಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ಗಳಿಂದ 38 ರನ್ ಗಳಿಸಿ ಮಿಂಚಿದರು.ಅಮೋಘ ಅರ್ಧಶತಕ ಗಳಿಸಿದ ಇಶಾನ್
46 ಎಸೆತಗಳನ್ನು ಎದುರಿಸಿ ನಾಲ್ಕು ಬೌಂಡರಿ ಹಾಗೂ ಐದು ಸಿಕ್ಸರ್ಗಳಿಂದ 80 ರನ್ ಗಳಿಸಿ ಔಟಾಗದೆ ಉಳಿದರು. ಭಾರತ ಮತ್ತು ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಫೈನಲ್ ಪಂದ್ಯವು ಶನಿವಾರ ನಡೆಯಲಿದೆ.









