The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಅಮರವಾಗಿದೆ 1837ರ ಅಮರ ಸುಳ್ಯ ದಂಗೆ: ಭಾಗ-3. ವಿಜಯದ ಸಂಕೇತವಾಗಿ ‘ಬಾವುಟ ಗುಡ್ಡ’ದಲ್ಲಿ ಹಾರಿದ ಬಾವುಟ..!

by ದಿ ಸುಳ್ಯ ಮಿರರ್ ಸುದ್ದಿಜಾಲ August 13, 2022
by ದಿ ಸುಳ್ಯ ಮಿರರ್ ಸುದ್ದಿಜಾಲ August 13, 2022
Share this article

ಬೆಳ್ಳಾರೆಯಿಂದ 1837 ಮಾರ್ಚ್ 30 ರಂದು ಕಾಸರಗೋಡನ್ನು ಲಗ್ಗೆ ಹಾಕಲು ಹೊರಟ ತಂಡವು ಅದರಲ್ಲಿ ಇನ್ನಿಲ್ಲದ ಯಶಸ್ಸನ್ನು ಕಂಡಿತು. ಕಾಸರಗೋಡು , ಕುಂಬ್ಳೆ , ಮಂಜೇಶ್ವರಗಳನ್ನು ಗೆದ್ದ ಆ ರೈತರು ಪುತ್ತೂರಿನಿಂದ ಸೇನೆಯು ಮಂಗಳೂರು ಸೇರುವ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪಿತು. ಈ ನಡುವೆ ಚಂದ್ರಗಿರಿ ಫೆರಿ, ಬಿಸಲೆ ಪಾಸ್ ಮತ್ತಿತರ ದಾರಿಗಳ ಮೂಲಕ ನಡೆಯುತ್ತಿದ್ದ ಕಂಪೆನಿಯ ಟಪ್ಪಾಲು ವ್ಯವಸ್ಥೆಯನ್ನು ಸಂಪೂರ್ಣವಾಗಿ ವಿಫಲಗೊಳಿಸಲಾಗಿತ್ತು . ಹೋರಾಟಗಾರರು

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಕೆದಂಬಾಡಿ ರಾಮಯ್ಯ ಗೌಡ

ಪ್ರತಿಯೊಂದು ಉಕ್ಕಡದಲ್ಲಿಯೂ , ಪ್ರತಿಯೊಂದು ಗಡಿಯಲ್ಲಿಯೂ ಕಾವಲು ಪಡೆಯನ್ನು ನಿಯೋಜಿಸಿದ್ದರು.ಉದ್ದೇಶಿತ ಹೋರಾಟ ಪ್ರಥಮ ಹಂತದಲ್ಲಿ ಅಭೂತಪೂರ್ವ ಜಯವನ್ನು ಗಳಿಸಿ ಸುಳ್ಯ,ಸುಬ್ರಹ್ಮಣ್ಯ , ಬಿಸಲೆ,ಉಪ್ಪಿನಂಗಡಿ , ಬೆಳ್ತಂಗಡಿ, ಕುಂಬ್ಳೆ , ಕಾಸರಗೋಡು,ಮಂಜೇಶ್ವರ , ಬಂಟ್ವಾಳ, ಮುಲ್ಕಿ ,ಸುರತ್ಕಲ್ , ಪುತ್ತೂರು ಈ ಎಲ್ಲಾ ಊರುಗಳೂ ರೈತಸೈನ್ಯದ ಕೈವಶವಾಗುತ್ತವೆ.ಕೊನೆಗೆ ನಡೆದ ಮಂಗಳೂರು ಆಕ್ರಮಣದಲ್ಲಿ ಕೆದಂಬಾಡಿ ರಾಮಯ್ಯ ಗೌಡರು ಮತ್ತಿತರರು ಅಪಾರ ಸಾಹಸವನ್ನು ತೋರಿಸುತ್ತಾರೆ. ಕೆನರಾ ಜಿಲ್ಲೆಯ ಕೇಂದ್ರಸ್ಥಾನ ಪತನಗೊಳ್ಳುತ್ತದೆ. ಆ ಸಮಯದಲ್ಲಿ ಸಂಗ್ರಾಮದ ಯೋಧರ ಸಂಖ್ಯಾಬಲ 10 ರಿಂದ 12 ಸಾವಿರಷ್ಟು ಇತ್ತು . ಎಂದು ಬ್ರಿಟಿಷ್ ದಾಖಲೆಗಳು ತಿಳಿಸುತ್ತವೆ.ಮಂಗಳೂರನ್ನು ಆಕ್ರಮಿಸಿದ ಹೋರಾಟಗಾರರ ಸೈನ್ಯ ಮೊದಲು ಮಾಡಿದ ಕಲಸವೆಂದರೆ ಲೈಟ್‌ಹೌಸ್‌ ಪ್ರದೇಶದಲ್ಲಿದ್ದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ
7 ಬಾವುಟವನ್ನು ಕೆಳಗಿಳಿಸಿ ಹಾಲೇರಿ ರಾಜಲಾಂಛನದ ಧ್ವಜವನ್ನು ಅರಿಸಲಾಗುತ್ತದೆ . ಹೋರಾಟದ ಮುಖ್ಯಸ್ಥರಲ್ಲೊಬ್ಬನಾದ ಗುಡ್ಡೆಮನೆ ತಮ್ಮಯ್ಯರು ರಾಮಯ್ಯ ಗೌಡರ ಸೂಚನೆಗೆ ಅನುಗುಣವಾಗಿ ಈ ಕಾರ್ಯವನ್ನು ನೆರವೇರಿಸಿ ವಿಜಯದ ಸಂಕೇತವನ್ನು ಸಾರುತ್ತಾರೆ.ಅಂದಿನಿಂದ ಮಂಗಳೂರಿನ ಈ ಉನ್ನತ ಮತ್ತು ಪ್ರಮುಖ ಪ್ರದೇಶವು ‘ಬಾವುಟ ಗುಡ್ಡ’ ಎಂಬ ಪ್ರಖ್ಯಾತಿಯನ್ನು ಪಡೆದುಕೊಳ್ಳುತ್ತದೆ. ನಂತರ ಸೈನ್ಯವು ಇಂಗ್ಲೀಷರ ಕಟ್ಟಡಗಳನ್ನು , ಕುರುಹುಗಳನ್ನು ಸುಟ್ಟು ಹಾಕುತ್ತದೆ . ಸೆರೆಮನೆಯನ್ನು ಒಡೆದು , ಬ್ರಿಟಿಷ್ ನ್ಯಾಯವ್ಯವಸ್ಥೆಯಲ್ಲಿ ವಿನಾಕಾರಣ ಶಿಕ್ಷೆಗೆ ಈಡಾಗಿದ್ದ ಸ್ಥಳೀಯ ಜನರನ್ನು ಮುಕ್ತಗೊಳಿಸಲಾಗುತ್ತದೆ . ಅವರು ಸ್ವಂತ ಇಚ್ಛೆಯಿಂದ ಸೈನ್ಯಕ್ಕೆ ಸೇರ್ಪಡೆಗೊಳ್ಳುತ್ತಾರೆ . ನಂತರ ಮಂಗಳೂರಿನ ಜನವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತದೆ . ಆಡಳಿತವನ್ನು ವಹಿಸಿಕೊಂಡ ಹೋರಾಟಗಾರರು ರೈತರಿಗೆ ಕಂದಾಯ ವಿನಾಯತಿಯನ್ನು ಘೋಷಿಸುತ್ತಾರೆ.ಮಂಗಳೂರಿನ ವರ್ತಕರ ಬೆಂಬಲವನ್ನು ಪಡೆದುಕೊಳ್ಳುತ್ತಾರೆ.ಎಲ್ಲವೂ ಸುಗಮವಾಗಿ ನಡೆಯುತ್ತದೆ . ಮಂಗಳೂರನ್ನು ಭದ್ರಪಡಿಸಿದ ನಂತರ ಹೋರಾಟಗಾರರ ಹಲವು

ಬೆಳ್ಳಾರೆಯ ಬ್ರಿಟೀಷರ ಖಜಾನೆ ಕಟ್ಟಡ

ಪ್ರಮುಖರು ಮಡಿಕೇರಿ ಪಟ್ಟಣಕ್ಕೆ ಲಗ್ಗೆ ಹಾಕಲು ಸುಳ್ಯ , ಸುಬ್ರಹ್ಮಣ್ಯದ ಕಡೆ ಹಿಂದಿರುಗುತ್ತಾರೆ. ಕೂಜುಗೋಡು ಅಪ್ಪಯ್ಯ ಗೌಡ ಮತ್ತು ಕೂಜುಗೋಡು ಮಲ್ಲಪ್ಪ ಗೌಡ ಇವರ ನೇತೃತ್ವದಲ್ಲಿ ಬಿಸಿಲೆ ಘಾಟಿಯ ಮುಖಾಂತರ ರೈತಸೈನ್ಯ ಮಡಿಕೇರಿಯ ಕಡೆ ಸಾಗಿತು.ಬಲಮುರಿಯ ಗುಡ್ಡೆಮನೆ ಅಪ್ಪಯ್ಯ ಗೌಡ ಮಡಿಕೇರಿಗೆ ಮುತ್ತಿಗೆ ಹಾಕಲು ಜನರನ್ನು ಒಟ್ಟು ಸೇರಿಸಲು ಪಾಡಿ ನಾಲ್ಕುನಾಡಿನ ಕಡೆ ತೆರಳಿದರು. ಆದರೆ ಅಷ್ಟು ಹೊತ್ತಿಗಾಗಲೇ ಮೇಜರ್ ಡ್ರಾಯರ್‌ನ ಬೆಟಾಲಿಯನ್‌ ಪಾಂಡವಪುರದಿಂದ ಮಡಿಕೇರಿಯನ್ನು ತಲಪಿಯಾಗಿತ್ತು.ಮಡಿಕೇರಿಯ ಉತ್ತರ ದಿಕ್ಕಿನ ಉಕ್ಕಡದ ಬಳಿ ಉಗ್ರ ಗುಂಡಿನ ಕಾಳಗ ನಡೆಯಿತು.ಆದರೆ ರೈತಸೇನೆಯ ಕಾದಾಟ ಕೊನೆಗೂ ಫಲಪ್ರದವಾಗಲಿಲ್ಲ. ಗುಡ್ಡೆಮನೆ ಅಪ್ಪಯ್ಯ ಗೌಡ ಮತ್ತಿತರರ ಕೆಚ್ಚೆದೆಯ ಪ್ರತಾಪವು ಸಾಫಲ್ಯವನ್ನು ಪಡೆಯಲಿಲ್ಲ. ಸಂಗ್ರಾಮದಲ್ಲಿ ವೀರೋಚಿತ ಸೋಲು ಎದುರಾಯಿತು.ಅತ್ತ ಮಂಗಳೂರಿನ ಬ್ರಿಟೀಷರ ಸಹಾಯಕ್ಕೆ ಮುಂಬಯಿಯಿಂದ ಸೈನ್ಯ ,ಮದ್ದುಗುಂಡು,ಸಂಗ್ರಾಮ ಸಾಧನಗಳು ಬರುವ ವ್ಯವಸ್ಥೆಯಾಯಿತು. ಸೈನಿಕರನ್ನೂ ,ಸಾಮಾನು ಸರಂಜಾಮನ್ನು ಒಯ್ಯಲು ಜಹಜುಗಳು ಸಿದ್ಧವಾದವು , ಧಾರವಾಡ , ಬೆಳಗಾಂಗಳಿಂದ ಸೈನ್ಯಗಳು ಮಂಗಳೂರಿಗೆ ಹೊರಟವು. ಕೆನರಾ ಸೈನ್ಯಗಳ ನಾಯಕ ಬ್ರಿಗೇಡಿಯರ್ ಅಲನ್‌ಗೆ ಮಂಗಳೂರಿನ ಸಮಾಚಾರ ಹೋಯಿತು . ಕೂಡಲೇ ಕರ್ನಲ್ ಗ್ರೀನ್ ನಾಯಕತ್ವದಲ್ಲಿ ಸೈನ್ಯವನ್ನು ಮಂಗಳೂರಿಗೆ ಕಳುಹಿಸಿದ ಮುಂಬೈ ಕಡೆಯಿಂದಲೂ ಸೈನ್ಯ ಬಂತು.ಎಪ್ರಿಲ್ 16 ರ ವೇಳೆಗೆ ಬ್ರಿಟಿಷ್ ಅಧಿಕಾರಿಗಳೆಲ್ಲ ಕಲೆತು ವಿಚಾರ ಮಾಡಿ , ಹೋರಾಟಗಾರರನ್ನು ಎದುರಿಸುವ ನಿಶ್ಚಯ ಮಾಡಿದರು.
(ಮುಂದುವರಿಯುವುದು
)

ನಿರೂಪಣೆ:ಗಂಗಾಧರ ಕಲ್ಲಪಳ್ಳಿ.
ಮಾಹಿತಿ ಕೃಪೆ: ಹಿರಿಯ ಸಾಹಿತಿ ವಿದ್ಯಾಧರ ಕುಡೆಕಲ್ಲು ಅವರ ‘ಅಮರ ಸುಳ್ಯ -1837’ ಕೃತಿ ಹಾಗು ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಮಂಗಳೂರು ಪ್ರಕಟಿಸಿದ ಕೈಪಿಡಿ.

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ಅಮರವಾಗಿದೆ 1837ರ ಅಮರ ಸುಳ್ಯ ದಂಗೆ- ಭಾಗ-2: ಹೋರಾಟಕ್ಕೆ ಪ್ರಭಾವಶಾಲಿ ನಾಯಕ ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವ- ಬೆಳ್ಳಾರೆಯ ಕಂಪೆನಿಯ ಖಜಾನೆ ಸ್ವಾಧೀನಕ್ಕೆ.!
next post
ಅಮರವಾಗಿದೆ 1837ರ ಅಮರ ಸುಳ್ಯ ದಂಗೆ- ಭಾಗ-4:ಬ್ರಿಟೀಷರ ಸೇನೆ ಮತ್ತು ರೈತ ಸೈನ್ಯದ ಮಧ್ಯೆ ನಡೆಯಿತು ಭೀಕರ ಕದನ: ಆದರೂ ಮಂಗಳೂರನ್ನು ಉಳಿಸಿಕೊಳ್ಳಲಾಗಲಿಲ್ಲ..!

You may also like

ಸ್ಪೀಕರ್ ಯು.ಟಿ.ಖಾದರ್ ಅವರಿಂದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ

June 8, 2023

ಕೇರಳಕ್ಕೆ ಮುಂಗಾರು ಪ್ರವೇಶ: ವಾಡಿಕೆಗಿಂತ ಎಂಟು ದಿನ ತಡವಾಗಿ ಮಾನ್ಸೂನ್...

June 8, 2023

ಗ್ಯಾರಂಟಿ ಯೋಜನೆಗಳಅರ್ಜಿ ಸಲ್ಲಿಕೆ, ಅನುಮೋದನೆ ಪ್ರಕ್ರಿಯೆ ಸರಳವಾಗಿರಲಿ; ಅಧಿಕಾರಿಗಳಿಗೆ ಸಿಎಂ...

June 8, 2023

ಗೃಹಲಕ್ಷ್ಮಿ ಯೋಜನೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರಕಾರ

June 7, 2023

ಅರಬ್ಬಿ ಸಮುದ್ರದಲ್ಲಿ ‘ಬಿಪರ್ಜೋಯ್’ ಚಂಡಮಾರುತ ಸೃಷ್ಟಿ: ತೀವ್ರ ಸ್ವರೂಪ ಪಡೆಯುತ್ತಿರುವ...

June 7, 2023

ಸಂಪಾಜೆಯ ನದಿಗಳಲ್ಲಿ ತುಂಬಿದ ಹೂಳು ತೆಗೆಯುವ ಕಾರ್ಯಾಚರಣೆಗೆ ಚಾಲನೆ

June 7, 2023

ಸುಳ್ಯ ನಗರ ಪಂಚಾಯತ್ ಪರಿಸರ ಈಗ ತ್ಯಾಜ್ಯ ಮುಕ್ತ..! ನ.ಪಂ.ಸುತ್ತಲೂ...

June 6, 2023

ಡೆಂಗ್ಯೂ, ಮಲೇರಿಯಾ ಬಗ್ಗೆ ಮುನ್ನೆಚ್ಚರಿಕೆ ಇರಲಿ: ಡಾ. ಕುಮಾರ್

June 6, 2023

ನೈತಿಕ ಪೊಲೀಸ್​ಗಿರಿ ತಡೆಗೆ ‘ಆ್ಯಂಟಿ ಕಮ್ಯುನಲ್ ವಿಂಗ್’ ಸ್ಥಾಪನೆ: ಗೃಹ...

June 6, 2023

ಸಂಪಾಜೆ ಗ್ರಾಮದ ಮೂಲಭೂತ ಅಭಿವೃದ್ಧಿಗಾಗಿ ಹೋರಾಟ: ಸಂಪಾಜೆ ಮೂಲಭೂತ ಸೌಕರ್ಯಗಳ...

June 6, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ಸ್ಪೀಕರ್ ಯು.ಟಿ.ಖಾದರ್ ಅವರಿಂದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ
  • 11ರಿಂದ ಜಿಲ್ಲೆಯಾದ್ಯಂತ ಜಾನುವಾರುಗಳ ಚರ್ಮ ಗಂಟು ರೋಗದ ವಿರುಧ್ಧ ಉಚಿತ ಲಸಿಕಾ ಅಭಿಯಾನ
  • ಕೇರಳಕ್ಕೆ ಮುಂಗಾರು ಪ್ರವೇಶ: ವಾಡಿಕೆಗಿಂತ ಎಂಟು ದಿನ ತಡವಾಗಿ ಮಾನ್ಸೂನ್ ಆಗಮನ: ಕೇರಳದಲ್ಲಿ 4 ದಿನ ಮಳೆಯ ಮುನ್ಸೂಚನೆ
  • ಗ್ಯಾರಂಟಿ ಯೋಜನೆಗಳಅರ್ಜಿ ಸಲ್ಲಿಕೆ, ಅನುಮೋದನೆ ಪ್ರಕ್ರಿಯೆ ಸರಳವಾಗಿರಲಿ; ಅಧಿಕಾರಿಗಳಿಗೆ ಸಿಎಂ ಸೂಚನೆ: ಆಗಸ್ಟ್‌ನಲ್ಲಿ ಗೃಹ ಜ್ಯೋತಿ, ಗೃಹಲಕ್ಷ್ಮಿ ಯೋಜನೆಗೆ ಚಾಲನೆ
  • ಬಿ.ಎಸ್.ಯಡಿಯೂರಪ್ಪ ಸೇರಿ ಬಿಜೆಪಿ ರಾಜ್ಯ ಮುಖಂಡರ ಭೇಟಿಯಾದ ಶಾಸಕಿ ಭಾಗೀರಥಿ ಮುರುಳ್ಯ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ