The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಅಮರವಾಗಿದೆ 1837ರ ಅಮರ ಸುಳ್ಯ ದಂಗೆ- ಭಾಗ-2: ಹೋರಾಟಕ್ಕೆ ಪ್ರಭಾವಶಾಲಿ ನಾಯಕ ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವ- ಬೆಳ್ಳಾರೆಯ ಕಂಪೆನಿಯ ಖಜಾನೆ ಸ್ವಾಧೀನಕ್ಕೆ.!

by ದಿ ಸುಳ್ಯ ಮಿರರ್ ಸುದ್ದಿಜಾಲ August 12, 2022
by ದಿ ಸುಳ್ಯ ಮಿರರ್ ಸುದ್ದಿಜಾಲ August 12, 2022
Share this article

ಹೋರಾಟವನ್ನು ಶಿಸ್ತುಬದ್ಧವಾಗಿ ಸಂಘಟಿಸಿದ, ಸಂಗ್ರಾಮದ ಬಹುವ್ಯಾಪಿ ಆಯಾಮಗಳನ್ನು ಆಯೋಜಿಸಿದ ಸುಳ್ಯ ಉಬರಡ್ಕ ಗ್ರಾಮದ ಕೆದಂಬಾಡಿ ರಾಮಯ್ಯ ಗೌಡ ಎಂಬ ಅತ್ಯಂತ ಪ್ರಭಾವಶಾಲಿಯಾದ ಅಗಾಧ ಶ್ರೀಮಂತ ಜಮೀನ್ದಾರ ಅದ್ಭುತ ಜನನಾಯಕನಾಗಿ ಹೊರಹೊಮ್ಮುತ್ತಾರೆ. ಸಶಸ್ತ್ರ ಸಮರಕ್ಕೆ ನಾಯಕನೊಬ್ಬ ಅನಿವಾರ್ಯ.ಅಂತಹ ನಾಯಕ ರಾಜ ಮನೆತನಕ್ಕೆ ಸೇರಿದವನಾದರೆ ಜನಸಾಮಾನ್ಯರು ಭಾವನಾತ್ಮಕತೆಯಿಂದ ಆಪ್ತತೆಯಿಂದ ಸ್ವೀಕರಿಸುತ್ತಾರೆ. ಇದು ಕೆದಂಬಾಡಿ ರಾಮಯ್ಯ ಗೌಡರಿಗೆ ಮತ್ತು ಅವರ ಆಪ್ತ ವಲಯಕ್ಕೆ ತಿಳಿದಿತ್ತು ಅದಕ್ಕೆಂದೇ ಅವರು

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಕೆದಂಬಾಡಿ ರಾಮಯ್ಯ ಗೌಡ

ಶನಿವಾರಸಂತೆ ಹೆಮ್ಮನೆಯಿಂದ ಪುಟ್ಟಬಸಪ್ಪ ಎಂಬ ತರುಣನನ್ನು ಕರೆತರುತ್ತಾರೆ . ಅವನಿಗೆ ಸನ್ಯಾಸಿಯ ವೇಷ ತೊಡಿಸುತ್ತಾರೆ.’ಕಲ್ಯಾಣಸ್ವಾಮಿ ‘ಎಂಬ ಹೆಸರನ್ನು ಇಡುತ್ತಾರೆ . ಸನಿಹದ ಹೂಮಲೆ ಕಾಡಲ್ಲಿ ಆಶ್ರಮ ಕಟ್ಟಿಸಿ ನೆಲೆ ನಿಲ್ಲಿಸುತ್ತಾರೆ.ಈತ ಹಾಲೇರಿ ರಾಜವಂಶಸ್ಥ ಎಂಬ ಸುದ್ದಿ ಎಲ್ಲೆಡೆ ಹರಡುತ್ತದೆ.ಜನ ಆಶ್ರಮಕ್ಕೆ ಭೇಟಿ ಕೊಡುತ್ತಾರೆ . ಸುಳ್ಯದ ಸುತ್ತಲಿನ ಗ್ರಾಮಗಳ ಯುವಕರನ್ನು ಯುದ್ಧಕ್ಕೆ ಸನ್ನದ್ಧಗೊಳಿಸಲಾಗುತ್ತದೆ . ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತದೆ.ಬಂದೂಕು ,
ಖಡ್ಗ ,ಗುರಾಣಿ, ಭಲ್ಲೆ , ಒಡಿಕತ್ತಿ , ನಾಯರ್ ಕತ್ತಿ ,ಬಿಲ್ಲು ಬಾಣ ಎಲ್ಲವನ್ನೂ ಕೆದಂಬಾಡಿ ರಾಮಯ್ಯ ಗೌಡ ಸಜ್ಜುಗೊಳಿಸುತ್ತಾರೆ.1837ರ ಮಾರ್ಚ್ 30 ರಂದು ಹೋರಾಟ ಆರಂಭಗಗೊಳ್ಳುತ್ತದೆ . ಕಲ್ಯಾಣಸ್ವಾಮಿಯನ್ನು ಪೂಮಲೆ ಕಾಡಿನ ಆಶ್ರಮದಿಂದ ಗೌರಪೂರ್ವಕವಾಗಿ ಕರೆದುಕೊಂಡು ಬರುತ್ತಾರೆ.ಈ ದಿನ ಕೆದಂಬಾಡಿ ರಾಮಯ್ಯ ಗೌಡನ ಮಗನ ಮದುವೆಯೆಂಬ ಯುದ್ಧ ಸನ್ನದ್ಧತೆಯ ಸಂಕೇತದ ಸುದ್ದಿಯನ್ನು ಸಾರಲಾಗಿರುತ್ತದೆ . ಜನ ಆಯುಧಪಾಣಿಗಳಾಗಿ ಕೆದಂಬಾಡಿ ರಾಮಯ್ಯ ಗೌಡರ ಮನೆಯ ಮುಂದಿನ ಗದ್ದೆಯಲ್ಲಿ ನರೆಯುತ್ತಾರೆ. ಕನಿಷ್ಠ 2000 ದಷ್ಟು ಅಪಾರ ಸಂಖ್ಯೆಯ ಹೋರಾಟಗಾರರು ಅಲ್ಲಿ ಸೇರಿರುತ್ತಾರೆ. ಅದೇ ದಿನ ಪೆರಾಜೆ, ಸುಳ್ಯ,ಸುಬ್ರಹ್ಮಣ್ಯ ಮಂಜ್ರಾಬಾದ್ ಬಿಸಲೆ ಮಾದಲಾದ ಕಡೆಗಳಲ್ಲಿ ಯುದ್ಧದ ನಿರೂಪಗಳನ್ನು ಪ್ರಕಟಿಸಲಾಗುತ್ತದೆ.ಸುಳ್ಯದ ಪ್ರಭಾವಶಾಲಿ ವ್ಯಕ್ತಿಯಾಗಿದ್ದ ಅಟ್ಲೂರು ರಾಮಪಯ್ಯ ಹೋರಾಟಕ್ಕೆ ಮೊದಲು ಬೆಂಬಲ ನೀಡಿದ್ದರೂ ಕೊನೆಗೆ ವಿರುದ್ಧ ದಿಕ್ಕಿಗೆ ವಾಲಿಕೊಂಡಿದ್ದ. ದಂಡು ಹೊರಡುವ ಮೊದಲು ಅವನನ್ನು ಕರೆತರಲು ಕೆದಂಬಾಡಿ ರಾಮಯ್ಯ ಗೌಡರು ತಂಡವೊಂದನ್ನು ರಚಿಸಿ ಪಯಸ್ವಿನಿ ನದಿಯ ಪಶ್ಚಿಮದ ದಡದಲ್ಲಿನ ಅಟ್ಲೂರಿಗೆ ಕಳುಹಿಸುತ್ತಾರೆ. ಆದರೆ ರಾಮಪ್ಪಯ್ಯನ ಜನ ಇವರ ವಿರುದ್ಧ ಕಾದಾಟ ನಿಲ್ಲುತ್ತಾರೆ . ಆತನನ್ನು ಬಂಧಿಸಿ ಕರೆತರುವುದು ಅವರಿಗೆ ಅನಿವಾರ್ಯವಾಗುತ್ತದೆ .
ಇಂದು ಮದುವೆಗದ್ದೆಯಂದು ಕರೆಯುವ ಮನೆಯ ಮುಂಭಾಗದ ಗದ್ದೆಯಲ್ಲಿ ಕಲ್ಯಾಣಸ್ವಾಮಿಗೆ ರಾಮಯ್ಯಗೌಡರ ನೇತೃತ್ವದಲ್ಲಿ ನಡೆದ ಕಾರ್ಯ ಯೋಜನೆಯಂತೆ ಯುದ್ಧದ ನಾಯಕತ್ವದ ಪಟ್ಟವನ್ನು

ಬೆಳ್ಳಾರೆಯ ಬ್ರಿಟೀಷರ ಖಜಾನೆಯಾಗಿದ್ದ ಕಟ್ಟಡ

ಕಟ್ಟಲಾಗುತ್ತದೆ.ಆ ಬಣ್ಣದ ಕುದುರೆಯನ್ನು ರಾಜಾಶ್ವವಾಗಿ ಅರ್ಪಿಸಲಾಗುತ್ತದೆ. ಜೊತೆಗೆ ಪ್ರೀತಿ, ಗೌರವದ ಪರಾಕಾಷ್ಟ್ರೆ ಎಂಬಂತೆ ಮಿತ್ತೂರು ನಾಯರ್ ದೈವದ ಕೆಂಪು ಕೊಡೆಯನ್ನು ಹಿಡಿಯುತ್ತಾರೆ. ಮಿತ್ತೂರ್ ನಾಯರ್‌ ಸುಳ್ಯ ಪರಿಸರದ ಅತ್ಯಂತ ಕಾರಣಿಕದ ದೈವವೆಂಬ ನಂಬಿಕೆ ಇಂದಿಗೂ ಪ್ರಚಲಿತದಲ್ಲಿದೆ. ಇಂತಹ ದೈವದ ಛತ್ರಚಾಮರವನ್ನು ಹಿಡಿಯುವ ಮೂಲಕ ಈ ಹೋರಾಟದ ಬಗ್ಗೆ ಜನ ಸಾಮಾನ್ಯರಿಗಿದ್ದ ಅರ್ಪಣಾ ಮನೋಬಾವ ಅರ್ಥವಾಗುತ್ತದೆ.ಮದುವೆ ಗದ್ದೆಯಲ್ಲಿ ಕ್ರಿ.ಶ.1837 ಮಾರ್ಚ್ 30 ರಂದು ರೈತ ಸೈನ್ಯ ಜಮಾವಣೆಯಾದಲ್ಲಿಂದ ಕೆದಂಬಾಡಿ ರಾಮಯ್ಯ ಗೌಡರ ನಾಯಕತ್ವದ ಗುಣಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಮೊದಲು ದಂಡು ಬೆಳ್ಳಾರೆಯತ್ತ ಸಾಗಿ ಕಂಪೆನಿಯ ಖಜಾನೆಯನ್ನು ಸ್ವಾಧೀನಕ್ಕೆ ಪಡೆದುಕೊಳ್ಳುತ್ತದೆ. ಸ್ಥಳೀಯ ಶಿರಸ್ತೇದಾರ ದೇವಪ್ಪನ ಪ್ರತಿಭಟನೆ ನಿಷ್ಪಲಗೊಳ್ಳುತ್ತದೆ.
ಪೈಶ್ಕಾರನ ಕಚೇರಿಯ ಮುಖ್ಯ ಶಿರಸ್ತೇದಾರ, ತಹಸೀಲ್ದಾರ ಇನ್ನಿತರ ಉದ್ಯೋಗಿಗಳನ್ನು ಸೆರೆ ಹಿಡಿಯುತ್ತಾರೆ. ಬೆಳ್ಳಾರೆಯಲ್ಲಿ 3000 ಕ್ಕಿಂತಲೂ ಹೆಚ್ಚು ಹೋರಾಟಗಾರರು ಜಮಾವಣೆಗೊಂಡಿದ್ದರು. ದಂಡಿನಲ್ಲಿ ಕುದುರೆ ಮತ್ತು ಆನೆಗಳೂ ಇದ್ದವು . ಬೆಳ್ಳಾರೆಯಲ್ಲಿ ಹೋರಾಟದ ಸೇನಾಳುಗಳನ್ನು ನಾಲ್ಕು ತಂಡಗಳಾಗಿ ವಿಂಗಡಿಸಲಾಗುತ್ತದೆ. 800 ಜನರ ಮೊದಲ ದಂಡು ಕುಡೆಕಲ್ಲು ಪುಟ್ಟ ಗೌಡ ಹಾಗೂ ಕುಂಚಡ್ಕ ರಾಮ ಗೌಡರ ನೇತೃತ್ವದಲ್ಲಿ ಕುಂಬ್ಳೆ – ಕಾಸರಗೋಡು ಮಂಜೇಶ್ವರಗಳನ್ನು ಗೆಲ್ಲಲು ಕಳುಹಿಸಲಾಯಿತು. ಎರಡನೇ ದಳ ಬಂಟ್ವಾಳ ಕಾರ್ಕಳಕ್ಕೆ ಮತ್ತು ಮೂರನೇ ತಂಡ ಕೂಜುಗೋಡು ಮಲ್ಲಪ್ಪ ಗೌಡ ಹಾಗೂ ಅಪ್ಪಯ್ಯ ಗೌಡರ ಮುಂದಾಳುತನದಲ್ಲ ಉಪ್ಪಿನಂಗಡಿ – ಬಿಸಲೆ – ಐಗೂರಿಗೆ ಹೋಗುತ್ತದೆ . ಕಲ್ಯಾಣಸ್ವಾಮಿ , ಕೆದಂಬಾಡಿ ರಾಮಯ್ಯ ಗೌಡ, ಗುಡ್ಡೆಮನೆ ಅಪ್ಪಯ್ಯ ಗೌಡ ಹಾಗೂ ಕುಕ್ಕುನೂರು ಚೆನ್ನಯ್ಯ ಇವರುಗಳಿದ್ದ ಪ್ರಧಾನ ಸೈನ್ಯವು ಮಂಗಳೂರಿಗೆ ಹೊರಟಿತು. ಮಂಗಳೂರಿಗೆ ಹೊರಟ ಮುಖ್ಯ ಸೈನ್ಯ ಮೊದಲು ಪುತ್ತೂರಿಗೆ ಲಗ್ಗೆ ಇಟ್ಟಿತು. ಜನಸಮರದ ಸುದ್ದಿ ತಿಳಿದ ಕೆನರಾ ಜಿಲ್ಲೆಯ ಕಲೆಕ್ಟರ್ ಲೆವಿನ್ ಮಂಗಳೂಲಿನಿಂದ ಹೊರಟು ತುಕಡಿಯೊಂದಿಗೆ

ಪುತ್ತೂರಿಗೆ ಆಗಮಿಸಿದ. ಆದರೆ ಹೋರಾಟಗಾರರ ಸಂಖ್ಯೆ , ಜನಬೆಂಬಲ ಮತ್ತು ಸರಕಾರಿ ಉದ್ಯೋಗಿಗಳು ಅವರೊಂದಿಗೆ ಸೇರಿಕೊಂಡ ಬಗೆಯನ್ನು ನೋಡಿದ ಲೆವಿನ್‌ಗೆ ಯುದ್ಧಕ್ಕೆ ಧುಮುಕಲು ಎದೆಗಾರಿಕೆ ಸಾಲದಾಯಿತು. ಪುತ್ತೂರಲ್ಲಿ ಕಂಪೆನಿ ಕಛೇರಿ ಸುಲಭವಾಗಿ ಹೋರಾಟಗಾರರ ವಶಕ್ಕೆ ಬಂತು. ಅಲ್ಲಿನ ಉದ್ಯೋಗಿಗಳು ಬಂಧನಕ್ಕೊಳಗಾದರು. ಎರಡು ದಿನ ದೂರದಲ್ಲಿದ್ದು ಹೊಂಚು ಹಾಕಿದ ಲೆವಿನ್ ಯುದ್ಧ ನಡೆಸಿದರೆ ತನಗೇ ಅಪಾಯ ಎಂದು ತಿಳಿದು ಎಪ್ರಿಲ್ 2 ನೇ ರಾತ್ರಿ ಅಲ್ಲಿಂದ ಮಂಗಳೂರು ಕಡೆ ಕಾಲ್ಕಿತ್ತ , ಪುತ್ತೂರಲ್ಲಿ ಅದಾಗಲೇ ಅಪಾರ ಪ್ರಮಾಣದ ಸಶಸ್ತ್ರ ಜನ ಸೇರಿದ್ದರು. ಅಲ್ಲಿ ಅಪಾಯವನ್ನು ಎದುರು ಹಾಕಿಕೊಳ್ಳುವುದಕ್ಕಿಂತ ದುರ್ಬಲ ಮಂಗಳೂರನ್ನು ರಕ್ಷಿಸಲು ಮುಂದಾಗುವುದು ಒಳಿತೆಂದು ಲೆವಿನ್ ಭಾವಿಸಿದ . ಮಂಗಳೂರಲ್ಲಿ ಸಹ ಅಲ್ಲಿನ ನಿವಾಸಿಗಳ ಅಸಹಕಾರ ಲೆವಿನ್ ಗಮನಕ್ಕೆ ಬಂತು. ಪುತ್ತೂರಿಂದ ಮಂಗಳೂರಿಗೆ ಹೋಗುವ ದಾರಿಯಲ್ಲಿ ಲೆವಿನ್ ಸೈನಿಕರನ್ನು ಒಟ್ಟು ಸೇರಿಸಿ ಬಂದೂಕು ಮತ್ತು ಮದ್ದುಗುಂಡುಗಳನ್ನು ಕೊಟ್ಟರೂ ಅವರುಗಳು ತಮಗೆ ಕೊಟ್ಟ ಕೆಲಸವನ್ನು ನಿರ್ವಹಿಸುವ ಬದಲು ಯಾರಿಗೂ ತಿಳಿಸದೆ ನಾಪತ್ತೆಯಾದರು.ಈ ಕಲೆಕ್ಟರ್ ಮಂಗಳೂರಿಗೆ ತಲಪುವ ಹೊತ್ತಿಗೆ ಊರು ನಿರ್ಜನವಾಗಿತ್ತು. ಅಲ್ಲಿನ ಜನ ಹೋರಾಟಗಾರರೊಂದಿಗೆ ಸಂಪರ್ಕದಲ್ಲಿರುವುದು ಅವನ ಗಮನಕ್ಕೆ ಬಂದಿತು , ನಗರದ ಕಾವಲು ಪಡೆ ಸಹ ಅವರೊಂದಿಗೆ ಸೇರಿಕೊಂಡಿತ್ತು . ಒಂದೆಡೆ ಹೋರಾಟಗಾರರೊಂದಿಗೆ ಕಾದಾಡುತ್ತಾ,ಇನ್ನೊಂದೆಡೆ ಯುರೋಪಿಯನ್ ಕುಟುಂಬಗಳನ್ನು ಮಂಗಳೂರಿನಿಂದ ತೆರವು ಮಾಡಿ ಅಪಾಯಕಾರಿಯಲ್ಲದ ಸ್ಥಳಕ್ಕೆ ಕಳುಹಿಸಲು ಕಂಪೆನಿಯ ಅಧಿಕಾರಿಗಳು ತೀರ್ಮಾನಿಸಿದರು. ಎಪ್ರಿಲ್ 5 ರಂದು ಅವರನ್ನು ಹಡಗಿಗೆ ಹತ್ತಿಸಲು ನಿರ್ಧರಿಸಿದ್ದರೂ ಅದು ಸಾಧ್ಯವಾಗಲಿಲ್ಲ. ಈ ನಡುವೆ ಖಜಾನೆಯನ್ನು ಸಂರಕ್ಷಿಸುವ ಪ್ರಯತ್ನದಿಂದ ಅವರ ಉಳಿದ ಕೆಲಸಕ್ಕೂ ಅಡಚಣೆಯಾಯಿತು . ಕೊನೆಗೂ ಆ ಸಾಹಸವನ್ನು ಕೈಬಿಡಬೇಕಾಯಿತು. ಅಂತೂ ಇಂತೂ ಎಪ್ರಿಲ್ 6 ಮತ್ತು 7 ರಂದು ಒಂದಷ್ಟು ಜನ ಮಂಗಳೂರು ತೊರೆದು ಕಣ್ಣನೂರಿಗೆ ಪಲಾಯನ ಮಾಡಿದರು. 1837 ರ ಹೋರಾಟದ ಸೈನ್ಯವು ಮಂಗಳೂರಿನ ಕಡೆ ಸಾಗುತ್ತಿದ್ದಂತೆ ಅದಕ್ಕೆ ದಾರಿಯುದ್ದಕ್ಕೂ ಅಪಾರವಾದ ಜನಬೆಂಬಲ , ಪ್ರೋತ್ಸಾಹ , ನೆರವು ಮತ್ತು ಸಹಭಾಗಿತ್ವ ದೊರಕುತ್ತದೆ. ದಂಡಿನ ಗಾತ್ರ ವಿಶಾಲವಾಗಿ ಹಿಗ್ಗುತ್ತದೆ . ಧರ್ಮಸ್ಥಳದ ಧರ್ಮಾಧಿಕಾರಿ ಮಂಜಯ್ಯ ಹೆಗ್ಗಡೆ ಫಿರಂಗಿ , ಕುದುರೆ ಹಾಗು ಅಪಾರ ಪ್ರಮಾಣದ ಹಣವನ್ನು ನೀಡುತ್ತಾರೆ. ನಂದಾವರದಲ್ಲಿದ್ದ ಬಂಗಾಡಿ ಅರಸು ಮನೆತನದ ಲಕ್ಷ್ಮಪ್ಪ ಬಂಗರಸ ದೊಡ್ಡ ಸಂಖ್ಯೆಯ ಯೋಧರೊಂದಿಗೆ ನೇರವಾಗಿ ಯುದ್ಧಕ್ಷೇತ್ರಕ್ಕೆ ಧಾವಿಸುತ್ತಾರೆ . ಉಪ್ಪಿನಂಗಡಿಯಲ್ಲಿ ಕಂಪೆನಿಯ ಉದ್ಯೋಗಿ ಮಂಜ ದಂಡಿಗೆ ಜನರನ್ನು ಜಮಾವಣಿಗೊಳಿಸುತ್ತಾರೆ.
(ಮುಂದುವರಿಯುವುದು).

ನಿರೂಪಣೆ- ಗಂಗಾಧರ ಕಲ್ಲಪಳ್ಳಿ.

ಮಾಹಿತಿ ಕೃಪೆ: ಹಿರಿಯ ಸಾಹಿತಿ ವಿದ್ಯಾಧರ ಕುಡೆಕಲ್ಲು ಅವರ ‘ಅಮರ ಸುಳ್ಯ -1837’ ಕೃತಿ ಹಾಗು ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಮಂಗಳೂರು ಪ್ರಕಟಿಸಿದ ಕೈಪಿಡಿ.

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ಅಮರವಾಗಿದೆ 1837ರ ಅಮರ ಸುಳ್ಯ ದಂಗೆ: ಭಾಗ-1. ಮೊದಲ ಸ್ವಾತಂತ್ರ್ಯ ಸಮರಕ್ಕೆ ಎರಡು ದಶಕ ಮೊದಲೇ ನಡೆದಿತ್ತು ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ರೈತರ ಕೆಚ್ಚೆದೆಯ ಹೋರಾಟ..!
next post
ಅಮರವಾಗಿದೆ 1837ರ ಅಮರ ಸುಳ್ಯ ದಂಗೆ: ಭಾಗ-3. ವಿಜಯದ ಸಂಕೇತವಾಗಿ ‘ಬಾವುಟ ಗುಡ್ಡ’ದಲ್ಲಿ ಹಾರಿದ ಬಾವುಟ..!

You may also like

ಗೃಹಲಕ್ಷ್ಮಿ ಯೋಜನೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರಕಾರ

June 7, 2023

ಅರಬ್ಬಿ ಸಮುದ್ರದಲ್ಲಿ ‘ಬಿಪರ್ಜೋಯ್’ ಚಂಡಮಾರುತ ಸೃಷ್ಟಿ: ತೀವ್ರ ಸ್ವರೂಪ ಪಡೆಯುತ್ತಿರುವ...

June 7, 2023

ಸಂಪಾಜೆಯ ನದಿಗಳಲ್ಲಿ ತುಂಬಿದ ಹೂಳು ತೆಗೆಯುವ ಕಾರ್ಯಾಚರಣೆಗೆ ಚಾಲನೆ

June 7, 2023

ಸುಳ್ಯ ನಗರ ಪಂಚಾಯತ್ ಪರಿಸರ ಈಗ ತ್ಯಾಜ್ಯ ಮುಕ್ತ..! ನ.ಪಂ.ಸುತ್ತಲೂ...

June 6, 2023

ಡೆಂಗ್ಯೂ, ಮಲೇರಿಯಾ ಬಗ್ಗೆ ಮುನ್ನೆಚ್ಚರಿಕೆ ಇರಲಿ: ಡಾ. ಕುಮಾರ್

June 6, 2023

ನೈತಿಕ ಪೊಲೀಸ್​ಗಿರಿ ತಡೆಗೆ ‘ಆ್ಯಂಟಿ ಕಮ್ಯುನಲ್ ವಿಂಗ್’ ಸ್ಥಾಪನೆ: ಗೃಹ...

June 6, 2023

ಸಂಪಾಜೆ ಗ್ರಾಮದ ಮೂಲಭೂತ ಅಭಿವೃದ್ಧಿಗಾಗಿ ಹೋರಾಟ: ಸಂಪಾಜೆ ಮೂಲಭೂತ ಸೌಕರ್ಯಗಳ...

June 6, 2023

ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಉಚಿತ ವಿದ್ಯುತ್: ಸಿಎಂ ಸಿದ್ದರಾಮಯ್ಯ

June 6, 2023

200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಮಾರ್ಗಸೂಚಿ...

June 5, 2023

ಮುಂದಿನ 48 ಗಂಟೆಗಳಲ್ಲಿ ಕೇರಳಕ್ಕೆ ನೈರುತ್ಯ ಮುಂಗಾರು ಪ್ರವೇಶ ಸಾಧ್ಯತೆ:...

June 5, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ನಗರ ಸ್ವಚ್ಛತಾ ಅಭಿಯಾನ: ಆಲೆಟ್ಟಿ ರಸ್ತೆಯಲ್ಲಿ 37ನೇ ವಾರದ ಸ್ವಚ್ಛತಾ ಕಾರ್ಯಕ್ರಮ
  • ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
  • ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಗೃಹ ಸಚಿವ ಡಾ.ಜಿ. ಪರಮೆಶ್ವರ್ ಅವರಿಗೆ ಸನ್ಮಾನ
  • ಹನಿ‌ ಸುರಿಸಿ ಮಾಯವಾದ ವರುಣ: ಮುಂದುವರಿದ ಮಳೆಯ ಕಣ್ಣಾ ಮುಚ್ಚಾಲೆ
  • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಭಾರತ ವಿರುದ್ಧ ಬೃಹತ್ ಮೊತ್ತದತ್ತ ಆಸ್ಟ್ರೇಲಿಯ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ