ಸುಳ್ಯ:ಮನುಷ್ಯ ಮನಸ್ಸುಗಳ ಮಧ್ಯೆ ದ್ವೇಷದ ಗೋಡೆಗಳು ಅಳಿದು ಸೌಹಾರ್ದತೆಯ ಸೇತುವೆ ನಿರ್ಮಾಣವಾಗಬೇಕು ಎಂದು ಇತಿಹಾಸ ಪ್ರಸಿದ್ಧ ಅಜ್ಞಾವರ ಮೇನಾಲ ಮಖಾಂ ಉರೂಸ್ ಸಮಾರಂಭದ ಅಂಗವಾಗಿ ಏರ್ಪಡಿಸಿದ ಸಭವಹಾರ್ದ ಸಂಗಮದಲ್ಲಿ ಗಣ್ಯರು ಅಭಿಪ್ರಾಯಪಟ್ಟಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ಎಸ್ವೈಎಸ್ ದ.ಕ.ಜಿಲ್ಲೆಯ ಅಧ್ಯಕ್ಷ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ‘ ದ್ವೇಷ, ವೈರತ್ವ ಇಲ್ಲದ
ಯಾರಿಗೂ ದುಃಖ ಇಲ್ಲದ ಜಗತ್ತಿನ ನಿರ್ಮಾಣ ಇಂದಿನ ಅಗತ್ಯತೆಯಾಗಿದೆ. ಅದಕ್ಕಾಗಿ ಮನುಷ್ಯತ್ವದೆಡೆಗೆ ಸಾಗಿ ಸೌಹಾರ್ದತೆಯ ಸಾಮ್ರಾಜ್ಯ ನಿರ್ಮಾಣವಾಗಬೇಕು ಎಂದು ಹೇಳಿದರು. ಭಾರತ ದೇಶವು ಆತ್ಮವು ಗಟ್ಟಿಯಾಗಿರುವ ಸೌಹಾರ್ದತೆಯ ಮರ ಎಂದು ಬಣ್ಣಿಸಿದರು. ದೇವರು ನಮಗೆ ಹೃದಯ ನೀಡಿದೆ ಈ ಹೃದಯಗಳ ಮಧ್ಯೆ ಪ್ರೀತಿ, ದಯೆ,ಕರುಣೆ, ಸೌಹಾರ್ದತೆ ಹಂಚಬೇಕು.ವಿನಾಶದಿಂದ ವಿಕಾಸದೆಡೆಗೆ ಸಾಗಬೇಕು ಹೇಳಿದರು. ಸೌಹಾರ್ದತೆಯನ್ನು
ಮುಂದಿನ ಜನಾಂಗಕ್ಕೆ ತಲುಪಿಸಬೇಕು ಎಂದು ಹೇಳಿದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ ಮಾತನಾಡಿ ಮೌಲ್ಯಗಳಿಂದ, ಸೌಹಾರ್ದತೆಯಿಂದ ಬದುಕಬೇಕು ಎಂದು ಹೇಳಿದರು.ಎಂಜೆಎಂ ಅಜ್ಜಾವರ ಖತೀಬರಾದ ಹಸೈನಾರ್ ಫೈಝಿ ಕೊಡಗು ದುಃವಾ ನೆರವೇರಿಸಿದರು.
ಸೌಹಾರ್ದ ಸಮಾರಂಭದ ಅಧ್ಯಕ್ಷತೆಯನ್ನು ದರ್ಗಾ ಶರೀಫ್ ಮೊಕ್ತೆಸರರಾದ ಎಂ. ಗುಡ್ಡಪ್ಪ ರೈ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದ.ಕ.ಗೌಡ ವಿದ್ಯಾಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ನಿವೃತ್ತ ಉಪನ್ಯಾಸಕ ಜವರೇ ಗೌಡ ಮಾತನಾಡಿದರು. ಅಲಿ ದಾರಿಮಿ, ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ, ಜಮಾಯತ್ ಕಮಿಟಿ ಉಪಾಧ್ಯಕ್ಷ ಅಂದ ಹಾಜಿ, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಎ, ಕೋಶಾಧಿಕಾರಿ ಶರೀಫ್ ರಿಲಾಕ್ಷ್ ಜೊತೆ ಕಾರ್ಯದರ್ಶಿ ಖಾದರ್ ಎನ್ ಉಪಸ್ಥಿತರಿದ್ದರು. ಶಾಫಿ ದಾರಿಮಿ ಸ್ವಾಗತಿಸಿದರು. ರಫೀಕ್ ವಂದಿಸಿದರು. ಅಬ್ದುಲ್ ರಝಾಕ್ ಕೆ.ಎಚ್. ಕಾರ್ಯಕ್ರಮ ನಿರೂಪಿಸಿದರು.