ಕಾರವಾರ: ಯಲ್ಲಾಪುರ ತಾಲ್ಲೂಕಿನ ಅರೆಬೈಲ್ ಘಟ್ಟದ ಸಮೀಪ ತರಕಾರಿ ತುಂಬಿದ್ದ ಲಾರಿ ಬುಧವಾರ ನಸುಕಿನ ಜಾವ ಪಲ್ಟಿಯಾಗಿ, ಅದರಲ್ಲಿದ್ದ 9 ಮಂದಿ ಮೃತಪಟ್ಟಿದ್ದಾರೆ.ಹಲವು ಮಂದಿ ಗಾಯಗೊಂಡಿದ್ದಾರೆ. ಕುಮಟಾದಲ್ಲಿ ನಡೆಯುವ
ವಾರದ ಸಂತೆಗೆ ಹಾವೇರಿ ಜಿಲ್ಲೆಯ ಸವಣೂರಿನಿಂದ ಯಲ್ಲಾಪುರ ಮಾರ್ಗವಾಗಿ ತರಕಾರಿ ಸಾಗಿಸುವ ವೇಳೆ ದುರ್ಘಟನೆ ನಡೆದಿದೆ. ಮೃತರು ತರಕಾರಿ ವ್ಯಾಪಾರಿಗಳು ಹೇಳಲಾಗಿದೆ.ಲಾರಿಯಲ್ಲಿ ತರಕಾರಿ ದಾಸ್ತಾನಿನ ಜೊತೆಗೆ 25ಕ್ಕೂ ಹೆಚ್ಚು ವ್ಯಾಪಾರಿಗಳು ಪ್ರಯಾಣಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಂದಕಕ್ಕೆ ಲಾರಿ ಉರುಳಿದ ಪರಿಣಾಮ 9 ಮಂದಿ ಮೃತಪಟ್ಟಿದ್ದು, ಹಲವು ಜನರಿಗೆ ಗಂಭೀರ ಗಾಯಗಳಾಗಿದೆ. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿದೆ.