ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ ದಕ್ಷಿಣ ಆಫ್ರಿಕಾ 400 ರನ್ ಗಳ ಬೃಹತ್ ಗುರಿ ನೀಡಿದೆ. ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 399 ರನ್ ಗಳಿಸಿದೆ. ದಕ್ಷಿಣ ಆಫ್ರಿಕಾ ಪರ
ಹೆನ್ರಿಕ್ ಕ್ಲಾಸನ್ ಸ್ಫೋಟಕ ಶತಕ ದಾಖಲಿಸಿದರು. ಇತರ 3 ಮಂದಿ ಬ್ಯಾಟರ್ಗಳು ಅರ್ಧ ಶತಕ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಕ್ಲಾಸನ್ 12 ಬೌಂಡರಿ 4 ಸಿಕ್ಸರ್ ಸಹಿತ 109 ಗಳಿಸಿದರು. ರೀಝ ಹೆಂಡ್ರಿಕ್ಸ್ 9 ಬೌಂಡರಿ 3 ಸಿಕ್ಸರ್ ಸಹಿತ 85 ರನ್ ಬಾರಿಸಿದರೆ, ರಸ್ಸಿ ವಾನ್ ಡರ್ ಡಸ್ಸನ್ 8 ಬೌಂಡರಿ ಸಹಿತ 60 ರನ್ ಬಾರಿಸಿದರು. ನಾಯಕ ಐಡೆನ್ ಮಾಕ್ರಮ್ 44 ರನ್ ಗಳಿಸಿದರೆ,ಮಾರ್ಕೋ ಜಾನ್ಸನ್ 77 ರನ್ ಬಾರಿಸಿದರು.
ಇಂಗ್ಲೆಂಡ್ ಪರ ರೀಸ್ ಟಾಪ್ಲಿ 3 ವಿಕೆಟ್ ಪಡೆದರೆ ಆದಿಲ್ ರಶೀದ್, ಗಸ್ ಅಟ್ಕಿನ್ಸನ್ ತಲಾ 2 ವಿಕೆಟ್ ಕಬಳಿಸಿದರು.