ಹೊಸದಿಲ್ಲಿ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ಗೆಲುವಿಗೆ ಶ್ರೀಲಂಕಾ 280 ರನ್ ಗಳ ಸಾಧಾರಣ ಗುರಿ ನೀಡಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರಿಲಂಕಾ ಪರ ಚರಿತ್ ಅಸಲಂಕ ಶತಕ ಭಾರಿಸಿ ತಂಡಕ್ಕೆ ಆಸರೆಯಾದರು. ಚರಿತ್ ಅಸಲಂಕ 105 ಎಸೆತಗಳಲ್ಲಿ
6 ಬೌಂಡರಿ 5 ಸಿಕ್ಸರ್ ಸಹಿತ 108 ರನ್ ಬಾರಿಸಿದರು. ದನಂಜಯ ಡಿಸಿಲ್ವ ಜಿತೆ 78 ರನ್ ಗಳ ಜೊತೆಯಾಟ ಕಟ್ಟಿದರು. ದನಂಜಯ ಡಿಸಿಲ್ವ34 ರನ್ ಬಾರಿಸಿದರು. ಪಾತುಮ್ ನಿಸಾಂಕ 41, ನಾಯಕ ಕುಸಾಲ್ ಮೆಂಡಿಸ್ 19 ರನ್, ಸದೀರ ಸಮರವಿಕ್ರಮ 41,ಮಹೇಶ ತೀಕ್ಷಣ 22 ,ಚಮೀರ 4 ರನ್ ಗಳಿಸಿದರೆ ರಜಿತಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಬಾಂಗ್ಲಾದೇಶ ಪರ ತಂಝಿಮ್ ಹಸನ್ 3 ವಿಕೆಟ್ ಪಡೆದರೆ ನಾಯಕ ಶಾಕಿಬ್ ಉಲ್ ಹಸನ್ , ಶರೀಫುಲ್ ಇಸ್ಲಾಂ 2 ವಿಕೆಟ್ ಪೆಡೆದುಕೊಂಡರು ಹಾಗೂ ಹಸನ್ ಮಿರಾಝ್ ಒಂದು ವಿಕೆಟ್ ಕಬಳಿಸಿದರು











