ಸುಳ್ಯ:ವೇತನ ಬಿಡುಗಡೆ ಆಗದ ಕಾರಣ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಡಿಗ್ರೂಪ್ ನೌಕರರು ಮುಷ್ಕರ ಹಮ್ಮಿಕೊಂಡು ಆಸ್ಪತ್ರೆಯ ದೈನಂದಿನ ಕೆಲಸ ಕಾರ್ಯಗಳಿಗೆ ತೊಡಕು ಉಂಟಾದ ಹಿನ್ನಲೆಯಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆ ಜೂ.9ರಂದು ನಡೆಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿ ಹಾಗೂ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಯವರ ಸೂಚನೆಯಂತೆ ಮಾರ್ಚ್ ತಿಂಗಳ ವೇತನ ಬಿಡುಗಡೆಯಾಗಿರುತ್ತದೆ.ವೈದ್ಯಕೀಯ ಸಹ ನಿರ್ದೇಶಕರ ಸಹಿಯಾದಲ್ಲಿ ಮುಂದಿನ 5 -6 ದಿನಗಳಲ್ಲಿ ಮೇವರೆಗಿನ ವೇತನ ಪಾವತಿಯಾಗಲಿದೆ.
ರೋಗಿಗಳ ಹಿತ ದೃಷ್ಟಿಯಿಂದ ಹೊರಗುತ್ತಿಗೆ ಸಿಬ್ಬಂಧಿ ನೌಕರರು ಜೂ.10 ರಿಂದ ಕರ್ತವ್ಯಕ್ಕೆ ಹಾಜರಾಗಲು ವಿನಂತಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ವೇತನ ಮತ್ತಿತರ ಸಮಸ್ಯೆ ಉಂಟಾದರೆ ಆರೋಗ್ಯ ರಕ್ಷಾ ಸಮಿತಿಯನ್ನು ಸಂಪರ್ಕಿಸಲು ಸಿಬ್ಬಂದಿಗಳಿಗೆ ಸೂಚನೆ ನೀಡಲು ನಿರ್ಧರಿಸಲಾಯಿತು. ಸಭೆಯಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ರಾಧಾಕೃಷ್ಣ ಪರಿವಾರಕಾನ,ಚಂದ್ರನ್ ಕೂಟೇಲು,ಶಹೀದ್ ಪಾರೆ,ಅಬ್ದುಲ್ ರಝಾಕ್ ಭಾಗವಹಿಸಿದ್ದರು.