ಮ್ಯಾಂಚೆಸ್ಟರ್:ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಮೊದಲ ಇನ್ನೀಂಗ್ಸ್ನಲ್ಲಿ ಭಾರತ 358 ರನ್ಗಳಿಗೆ ಆಲ್ ಔಟ್ ಆಗಿದೆ.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಆತಿಥೇಯ ತಂಡವು ಎರಡನೇ ದಿನದಾಟದ ಮುಕ್ತಾಯಕ್ಕೆ
2 ವಿಕೆಟ್ಗೆ 225 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿದೆ. ಗಾಯಗೊಂಡು ಮರಳಿದ್ದ ರಿಷಬ್ ಪಂತ್ ಎರಡನೇ ದಿನ ಕ್ರೀಸಿಗೆ ಆಗಮಿಸಿ ಅರ್ಧ ಶತಕ (54; 75ಎಸೆತ) ಸಿಡಿಸಿದರು. ಶಾರ್ದೂಲ್ ಠಾಕೂರ್ 41 ರನ್ ಬಾರಿಸಿದರು.
ಇಂಗ್ಲೆಂಡ್ ಪರ ಬೆನ್ ಡಕೆಟ್ (94;100ಎ) ಮತ್ತು ಜ್ಯಾಕ್ ಕ್ಯಾಲಿ (84;113) ಮೊದಲ ವಿಕೆಟ್ ಜೊತೆಯಾಟದಲ್ಲಿ 166 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ಓಲಿ ಪೋಪ್ (ಔಟಾಗದೇ 20) ಮತ್ತು ಜೋ ರೂಟ್ (ಔಟಾಗದೇ 11) ಮೂರನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ.















