ಲಂಡನ್: ಜೋ ರೂಟ್ (99; 191ಎ, 4X9) ಅವರ ಬ್ಯಾಟಿಂಗ್ ಬಲದಿಂದ ಆತಿಥೇಯ ಇಂಗ್ಲೆಂಡ್ ತಂಡವು ಭಾರತದ ವಿರುದ್ಧ ಮೂರನೇ ಟೆಸ್ಟ್ನ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ಗೆ 251 ರನ್ ಗಳಿಸಿದೆ.ಆರಂಭಿಕ ಜೋಡಿ ಬೆನ್ ಡಕೆಟ್ ಮತ್ತು ಜಾಕ್ ಕ್ರಾಲಿ ನಿಧಾನ ಗತಿಯ ಬ್ಯಾಟಿಂಗ್ ಮಾಡಿ ಮೊದಲ ವಿಕೆಟ್ಗೆ 43 ರನ್ ಮಾಡಿದ ಸಂದರ್ಭದಲ್ಲಿ
ನಿತೀಶ್ ಕುಮಾರ್ (35ಕ್ಕೆ2) ಅವರು ಮೂರು ಎಸೆತಗಳ ಅಂತರದಲ್ಲಿ ಡಕೆಟ್ ಮತ್ತು ಕ್ರಾಲಿ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಬಳಿಕ ಒಲಿ ಪೋಪ್ ಜೊತೆಗೂಡಿದ ಜೊ ರೂಟ್ ಅವರು ತಂಡಕ್ಕೆ ಬಲ ತುಂಬಿದರು.ರೂಟ್ ಮತ್ತು ಓಲಿ ಪೋಪ್ (44;104ಎ) ಮೂರನೇ ವಿಕೆಟ್ಗೆ 109 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ಅಪಾಯಕಾರಿಯಾಗಿದ್ದ ಈ ಜೊತೆಯಾಟವನ್ನು ರವೀಂದ್ರ ಜಡೇಜ ಮುರಿದರು. ನಂತರ ಬಂದ ಹ್ಯಾರಿ ಬ್ರೂಕ್ (11) ಅವರನ್ನು ಕ್ರೀಸ್ನಲ್ಲಿ ಹೆಚ್ಚು ಹೊತ್ತು ಇರಲು ಬೂಮ್ರಾ ಅವಕಾಶ ನೀಡಲಿಲ್ಲ.
ಬಳಿಕ ರೂಟ್ ಅವರನ್ನು ಸೇರಿಕೊಂಡ ನಾಯಕ ಬೆನ್ ಸ್ಟೋಕ್ಸ್ (ಔಟಾಗದೇ 39;102ಎ) ನಿಧಾನಗತಿಯಲ್ಲಿ ರನ್ ಕಲೆಹಾಕಿದರು. ಅವರಿಬ್ಬರು ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ 79 ರನ್ ಗಳಿಸಿ, ಎರಡನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ.
ನಿತೀಶ್ ರೆಡ್ಡಿ 2, ಬೂಮ್ರಾ, ಜಡೇಜಾ ತಲಾ ಒಂದು ವಿಕೆಟ್ ಪಡೆದಿದ್ದಾರೆ.














