ಪುಣೆ: ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಮೊದಲ ಇನ್ನಿಂಗ್ಸ್ ಆರಂಭಿಸಿದ್ದು 1 ವಿಕೆಟ್ ಕಳೆದುಕೊಂಡು 16 ರನ್ಗಳಿಸಿದೆ. ಮೊ ಇನ್ನಿಂಗ್ಸ್ನಲ್ಲಿ ಕಿವೀಸ್ 259 ರನ್ಗಳಿಗೆ ಆಲ್ ಔಟ್ ಆಗಿದೆ. ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ
ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪ್ರವಾಸಿ ನ್ಯೂಜಿಲೆಂಡ್ ಬ್ಯಾಟಿಂಗ್ ಆರಂಭಿಸಿತು.ಭಾರತದ ಸ್ಪಿನ್ ಬೌಲರ್ಗಳ ಎದುರು ಪರದಾಡಿದ ನ್ಯೂಜಿಲೆಂಡ್ 79.1 ಓವರ್ಗಳಲ್ಲಿ 259 ರನ್ಗಳಿಗೆ ಆಲೌಟ್ ಆಯಿತು. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ 7 ವಿಕೆಟ್ ಪಡೆದರು. ಅಶ್ವಿನ್ 3 ವಿಕೆಟ್ ಪಡೆದರು.
ನ್ಯೂಜಿಲೆಂಡ್ ಪರ ಅನುಭವಿ ಡೆವೊನ್ ಕಾನ್ವೆ 76, ರಚಿನ್ ರವೀಂದ್ರ 65, ಮಿಚೇಲ್ ಸ್ಯಾಂಟ್ನರ್ 33 ರನ್ ಗಳಿಸಿ ಗಮನ ಸೆಳೆದರು.
ದಿನದಾಟದ ಅಂತ್ಯಕ್ಕೆ ಭಾರತ ಮೊದಲ ಇನ್ನಿಂಗ್ಸ್ ಆರಂಭಿಸಿದ್ದು 1 ವಿಕೆಟ್ ಕಳೆದುಕೊಂಡು 16 ರನ್ಗಳಿಸಿದೆ. ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾದರು. ಜೈಸ್ವಾಲ್ ಮತ್ತು ಗಿಲ್ ಕ್ರೀಸ್ನಲ್ಲಿದ್ದಾರೆ.