ಗಾಲ್: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕೆ ಭಾರತ 9 ವಿಕೆಟ್ ಕಳೆದುಕೊಂಡು 460 ರನ್ಗಳಿಸಿದೆ.ಮೊದಲ ದಿನದಾಟದ ಮುಕ್ತಾಯಕ್ಕೆ 73 ಓವರ್ಗಳಲ್ಲಿ 2 ವಿಕೆಟ್ಗಳಿಗೆ 288 ರನ್ ಗಳಿಸಿತ್ತು. ದೇವದತ್ತ ಪಡಿಕ್ಕಲ್
ಶತಕ ಬಾರಿಸಿ ಕ್ರಿಸ್ನಲ್ಲಿದ್ದರು. ಎರಡನೇ ದಿನದಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಪಡಿಕ್ಕಲ್ 167 ರನ್ಗಳಿಗೆ ಔಟಾದರು.ಪಡಿಕ್ಕಲ್ಗೆ ಉತ್ತಮ ಸಾಥ್ ನೀಡಿದ್ದ ರಿಷಭ್ ಪಂತ್ 39 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ದ್ರುವ್ ಜುರೇಲ್ ಉತ್ತಮ ಆಟವಾಡಿ 51 ರನ್ ಗಳಿಸಿ ಔಟಾದರು. ಉಳಿದಂತೆ ಜೈಸ್ವಾಲ್ 32, ರಾಹುಲ್ 82 ರನ್ ಗಳಿಸಿ ನಿನ್ನೆಯೇ ಔಟಾಗಿದ್ದರು.ಪ್ರಸಿದ್ಧ ಕೃಷ್ಣ ಮತ್ತು ಕುಲದೀಪ್ ಯಾದವ್ ಕ್ರಿಸ್ನಲ್ಲಿದ್ದಾರೆ. ಶ್ರೀಲಂಕಾ ಪರ ಕೇಶವ 3, ಪ್ರಭಾತ್ 4 ವಿಕೆಟ್ ಪಡೆದರು.








































