ಸುಳ್ಯ:ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ನಡೆಯುತ್ತಿದ್ದು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,08,487 ಮತದಾರರಿದ್ದಾರೆ.ಆ.16 ಸಂಜೆ 6 ಗಂಟೆ ತನಕ 2,08,487 ಗಣತಿ ನಮೂನೆಗಳನ್ನು (ಎನ್ಯುಮರೇಷನ್ ಫಾರ್ಮ್) ಹಂಚಿಕೆ ಮಾಡಲಾಗಿದ್ದು ಶೇ.100 ಪೂರ್ತಿಯಾಗಿದೆ. ಇದರಲ್ಲಿ
1,96,626 ಫಾರ್ಮ್ಗಳನ್ನು ಡಿಜಿಟೈಸ್ ಮಾಡಲಾಗಿದ್ದು ಶೇ.94.31 ಪೂರ್ತಿಯಾಗಿದೆ. ಕ್ಷೇತ್ರದಲ್ಲಿ ವಾಸ್ತವ್ಯ ಇಲ್ಲದವರು,ವಲಸೆ ಹೋದವರು,ಮರಣ ಹೊಂದಿದವರು,ದ್ವಿಪ್ರತಿ ದಾಖಲೆ ಇರುವವರು ಇತರ ಕಾರಣಗಳಿಂದ ಡಿಜಿಟೈಸ್ ಆಗದವರು 11,861 ಮಂದಿ ಶೇ.5.69 ಇದೆ ಎಂದು ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.ಆ.17 ಎಸ್ಐಆರ್ ಡಿಜಿಟೈಸ್ ಪ್ರಕ್ರಿಯೆಯ ಕೊನೆಯ ದಿನವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18,03,766 ಮತದಾರರಿದ್ದು 16,46,172 ಡಿಜಿಟೈಸ್ ಆಗಿದೆ.ವಾಸ್ತವ್ಯ ಇಲ್ಲದವರು,ವಲಸೆ ಹೋದವರು,ಮರಣ ಹೊಂದಿದವರು,ದ್ವಿಪ್ರತಿ ದಾಖಲೆ ಇರುವವರು
ಇತರ ಕಾರಣಗಳಿಂದ ಡಿಜಿಟೈಸ್ ಆಗದವರು 1,57,594, ಶೇ.8.74 ಇದೆ ಎಂದು ಪ್ರಕಟಣೆ ತಿಳಿಸಿದೆ.








































