ಕೇಪ್ಟೌನ್: ಎರಡನೇ ಟೆಸ್ಟ್ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಇದರಿಂದ ಎರಡು ಟೆಸ್ಟ್ಗಳ ಸರಣಿ ಸಮಬಲದಲ್ಲಿ ಸಮಾಪನಗೊಂಡಿತು. ಎರಡನೇ ಇನ್ನೀಂಗ್ಸ್ನಲ್ಲಿ ಗೆಲುವಿಗೆ 78 ರನ್ ಅಗತ್ಯವಿದ್ದ ಭಾರತ 3 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಸರಣಿಯ ಮೊದಲ ಪಂದ್ಯದಲ್ಲಿ
ಆತಿಥೇಯ ದಕ್ಷಿಣ ಆಫ್ರಿಕಾ ಇನಿಂಗ್ಸ್ ಮತ್ತು 32 ರನ್ಗಳಿಂದ ಗೆದ್ದಿತ್ತು.
ವೇಗದ ಬೌಲರ್ಗಳೇ ಪಾರುಪತ್ಯ ಮೆರೆದ ಈ ಪಂದ್ಯ ಒಂದೂವರೆ ದಿನದಲ್ಲಿ ಮುಕ್ತಾಯವಾಯಿತು.
ಭಾರತದ ವೇಗಿ ಮೊಹಮ್ಮದ್ ಸಿರಾಜ್ (15ಕ್ಕೆ6) ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 23.2 ಓವರ್ಗಳಲ್ಲಿ 55 ರನ್ ಗಳಿಸಿ ಆಲೌಟ್ ಅಯಿತು. ನಂತರ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ತಂಡ 34.5 ಓವರ್ಗಳಲ್ಲಿ 153 ರನ್ ಗಳಿಸಿ ಆಲೌಟ್ ಆಯಿತು. ಇದರೊಂದಿಗೆ 98 ರನ್ಗಳ ಮುನ್ನಡೆ ಗಳಿಸಿತು. ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ 36.5 ಓವರ್ಗಳಲ್ಲಿ 176 ರನ್ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ 79 ರನ್ಗಳ ಗುರಿ ನೀಡಿತು.
ದಕ್ಷಿಣ ಆಫ್ರಿಕಾದ ಏಡನ್ ಮರ್ಕರಂ ಏಕಾಂಗಿ ಹೋರಾಟದ ಶತಕ (106) ಭಾರಿಸಿದರು. ಭಾರತದ ಪರ ವೇಗಿಗಳಾದ ಜಸ್ಪ್ರೀತ್ ಬೂಮ್ರಾ 61 ರನ್ ನೀಡಿ 6 ವಿಕೆಟ್ ಕಿತ್ತರು. ಮುಖೇಶ್ ಕುಮಾರ್ 2, ಸಿರಾಜ್ 1 ವಿಕೆಟ್ ಉರುಳಿಸಿದರು. ಎರಡನೇ ಇನಿಂಗ್ಸ್ನಲ್ಲಿ ಭಾರತ 12 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗುರಿ ತಲುಪಿ ಗೆಲುವಿನ ನಗೆ ಬೀರಿತು.













