ಸುಳ್ಯ: ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯ ತಾಲೂಕಿನ ಯುವಕ – ಯುವತಿ ಮಂಡಲಗಳ ಕ್ರೀಡಾಕೂಟ ಫೆ.9ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿ ವಠಾರದಲ್ಲಿ ನಡೆಯಿತು.
ಕ್ರೀಡಾಕೂಟವನ್ನು ಉದ್ಯಮಿ ರಾಜೇಶ್ ಭಟ್ ನೆಕ್ಕಿಲ ಉದ್ಘಾಟಿಸಿದರು. ಯುವಜನ ಸೇವಾ ಸಂಸ್ಥೆ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ
ಗುತ್ತಿಗಾರು ಶ್ರೀದೇವಿ ಸಿಟಿ ಮಾಲಕ ದೇವಿಪ್ರಸಾದ್ ಚಿಕ್ಮುಳಿ, ಉದ್ಯಮಿ ರಾಜೇಶ್ ರೈ ಉಬರಡ್ಕ, ಗುತ್ತಿಗಾರು ಉಯನ್ಸ್ ಕ್ಲಬ್ ಅಧ್ಯಕ್ಷ ಕುಶಾಲಪ್ಪ ತುಂಬತ್ತಾಜೆ, ಉಪವಲಯಾರಣ್ಯಾಧಿಕಾರಿ ವೆಂಕಟೇಶ್, ಕಾಂಟ್ರಾಕ್ಟರ್ ಮಂಜುನಾಥ್ ಬಳ್ಳಾರಿ, ಭಾಗವಹಿಸಿದ್ದರು. ಯುವಜನ ಸಂಯುಕ್ತ ಮಂಡಳಿ ಗೌರವಾಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ, ಕ್ರೀಡಾ ಕಾರ್ಯದರ್ಶಿ ಲೋಹಿತ್ ಬಳ್ಳಡ್ಕ, ಕೋಶಾಧಿಕಾರಿ ಸಂಜಯ್ ನೆಟ್ಟಾರು ವೇದಿಕೆಯಲ್ಲಿದ್ದರು.
ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ವಿಜಯ ಕುಮಾರ್ ಉಬರಡ್ಕ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನಮಿತ ಹರ್ಲಡ್ಕ ವಂದಿಸಿದರು. ನಿರ್ದೇಶಕ ಸುಬ್ರಮಣಿ ಕಲ್ಲುಗುಂಡಿ ಕಾರ್ಯಕ್ರಮ ನಿರೂಪಿಸಿದರು.