ಸುಳ್ಯ:ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಹೆಸರಾಂತ ವಸ್ತ್ರ ಮಳಿಗೆ ಶೀತಲ್ ಕಲೆಕ್ಷನ್ಗೆ ಇಪ್ಪತ್ತರ ಸಂಭ್ರಮ.ಇದರ ಅಂಗವಾಗಿ ಸಂಸ್ಥೆಯ ನೂತನ ಲೋಗೋ ಅನಾವರಣ,ಸಹಕರಿಸಿದವರಿಗೆ ಸನ್ಮಾನ ಸಮಾರಂಭ ‘ಸವಿ ನೆನಪು’ ಕಾರ್ಯಕ್ರಮ ಫೆ.9ರಂದು ನಡೆಯಿತು.
ಇಪ್ಪತ್ತು ವರ್ಷಗಳ ಹಿಂದೆ ಮಳಿಗೆ ಉದ್ಘಾಟಿಸಿದ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ಹಾಗೂ ಗ್ರಾಹಕರಾಗಿ ಹಾಗೂ
ಹಿತೈಷಿಗಳಾಗಿ ಸಹಕರಿಸಿದ ಹಿರಿಯ ಉದ್ಯಮಿ ಕೃಷಿಕ ಪಳ್ಳಿಕುಂಞಿ ಹಾಜಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಂಸ್ಥೆಯ ನೂತನ ಲೋಗೋವನ್ನು ಅನಾವರಗೊಳಿಸಿ,
ಗ್ರಾಹಕರ ಅದೃಷ್ಟ ಚೀಟಿ ಕೂಪನ್ ಯೋಜನೆಯ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಎನ್.ಎ.ರಾಮಚಂದ್ರ ‘ವಿಶ್ವಾಸಾರ್ಹತೆಗೆ ಮತ್ತು ಗುಣಮಟ್ಟಕ್ಕೆ ಶೀತಲ್ ಕಲೆಕ್ಷನ್ ಮಾದರಿ ಎಂದು ಹೇಳಿದರು. ಅತ್ಯುತ್ತಮ ಗುಣಮಟ್ಟದ ವಸ್ತ್ರಗಳನ್ನು ಮಾರಾಟ ಮಾಡುವ ಮೂಲಕ ಜನರ ವಿಶ್ವಾಸವನ್ನು ಶೀತಲ್ ಗಳಿಸಿದೆ. ಮುಂದೆಯೂ ಯಶಸ್ಸಿನ ಉತ್ತುಂಗಕ್ಕೆ ಏರಲಿ ಎಂದು ಅವರು ಹೇಳಿದರು.

ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ ವೆಂಕಪ್ಪ ಗೌಡ,ಎಸ್ ಸಂಶುದ್ದೀನ್, ವರ್ತಕರ ಸಂಘದ ಅಧ್ಯಕ್ಷ ಪಿ. ಬಿ.ಸುಧಾಕರ ರೈ, ಲಯನ್ಸ್ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ಎಂ.ಬಿ ಸದಾಶಿವ, ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ ಎಸ್,ಮಾಜಿ ಸದಸ್ಯ ಮುಸ್ತಫಾ ಕೆ ಎಂ,ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್, ಲತೀಫ್ ಹರ್ಲಡ್ಕ, ಕಬೀರ್ ಕಟ್ಟೆಕ್ಕಾರ್ ಕತ್ತರ್ ಇಬ್ರಾಹಿಂ ಹಾಜಿ, ಹಮೀದ್ ಸಮ್ಮರ್ಕೂಲ್, ಹಮೀದ್ ಹಾಜಿ ಪಾಂಡಿ ಒಕ್ಕೆತ್ತೂರ್, ಹೋನೆಸ್ಟ್ ಇಸ್ಮಾಯಿಲ್ ಮಾಡಾವು, ಅಬ್ದುಲ್ಲ ಹಾಜಿ ಜಯನಗರ, ಹಾಜಿ ಕಲಾಂ ಕಟ್ಟೆಕ್ಕಾರ್ ಮತ್ತಿತರರು ಉಪಸ್ಥಿತರಿದ್ದರು.

ಶೀತಲ್ ಕಲೆಕ್ಷನ್ನ ಮಾಲಕ ಸಿ.ಅಬ್ದುಲ್ ರಜಾಕ್ ಹಾಜಿ, ಪತ್ನಿ ರಹಿಯಾನ, ಪುತ್ರ ಮಹಮ್ಮದ್ ತಸ್ನೀಮ್, ಪುತ್ರಿ ಆಯಿಷತ್ ತಹಸೀನ್, ಅಳಿಯ ಪ್ರೊ.ಇಸ್ಮಾಯಿಲ್ ಶಾಫಿ ಹಾಗೂ ಅಬ್ದುಲ್ ರಜಾಕ್ ಹಾಜಿಯವರ ಸಹೋದರರು ಉಪಸ್ಥಿತರಿದ್ದು ಅತಿಥಿಗಳನ್ನು ಹಾಗೂ ಗ್ರಾಹಕರನ್ನು ಸ್ವಾಗತಿಸಿ ಬರಮಾಡಿಕೊಂಡರು.ಪ್ರೊ.ಇಸ್ಮಾಯಿಲ್ ಶಾಫಿ ಸ್ವಾಗತಿಸಿ
ಪತ್ರಕರ್ತ ಶರೀಫ್ ಜಟ್ಟಿಪಳ್ಳ ಹಾಗೂ ತಸ್ನೀಮ್ ಕಾರ್ಯಕ್ರಮ ನಿರೂಪಿಸಿದರು.
20ರ ಹೊಸ್ತಿಲಲ್ಲಿ ಸುಳ್ಯದ ಜನಪ್ರಿಯ ವಸ್ತ್ರಮಳಿಗೆ ಶೀತಲ್ ಕಲಕ್ಷನ್: ಆಕರ್ಷಕ ಆಫರ್- ಭರ್ಜರಿ ದರ ಕಡಿತ ಮಾರಾಟ:
ಪುರುಷರ, ಮಹಿಳೆಯರ, ಮಕ್ಕಳ ಹೀಗೆ ಎಲ್ಲಾ ವಯೋಮಾನದ ಜನರಿಗೆ ಗುಣಮಟ್ಟದ ಅತ್ಯಾಕರ್ಷಕ ವಸ್ತ್ರಗಳನ್ನು ನೀಡುವ ಮೂಲಕ ಬಟ್ಟೆಗಳ ಗುಣಮಟ್ಟ ಮತ್ತು ತನ್ನ ಗ್ರಾಹಕ ಸ್ನೇಹಿ ನಿಲುವಿನಿಂದ ಮನೆ ಮಾತಾಗಿರುವ ಮಳಿಗೆ ಸುಳ್ಯ ಖಾಸಗೀ ಬಸ್ ನಿಲ್ದಾಣದ ಬಳಿ ಇರುವ ಶೀತಲ್ ಕಲೆಕ್ಷನ್. ಇದೀಗ ಸುಳ್ಯದಲ್ಲಿ ಎರಡು ದಶಕಗಳನ್ನು ಪೂರೈಸುತ್ತಿರುವ ಶೀತಲ್ ಕಲೆಕ್ಷನ್ ಸುಂದರವಾಗಿ ನವೀಕರಣಗೊಂಡು ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ಗುಣಮಟ್ಟದ ಬಟ್ಟೆಗಳ ಜೊತೆಗೆ ಅತ್ಯಾಕರ್ಷಕ ಆಫರ್ ಹಾಗೂ ಭರ್ಜರಿ ದರ ಕಡಿತ ಮಾರಾಟದ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿದೆ.

2004 ಸೆ.26ರಂದು ಸುಳ್ಯದ ಖಾಸಗೀ ಬಸ್ ನಿಲ್ದಾಣದ ಬಳಿಯಲ್ಲಿ ಶೀತಲ್ ಕಲೆಕ್ಷನ್ ಆರಂಭಗೊಂಡಿತು. ಅಲ್ಲಿಂದ ಇಲ್ಲಿಯವರೆಗೆ ಎರಡು ದಶಕಗಳಿಂದ ಗ್ರಾಹಕರ ಸಂತೃಪ್ತಿಗೆ ಪ್ರಾಧಾನ್ಯತೆ ನೀಡಿದ ಸಂಸ್ಥೆ ಹಿಂತಿರುಗಿ ನೋಡಿಲ್ಲ. ಜನರ, ಗ್ರಾಹಕರ ಭರಪೂರ ಬೆಂಬಲದೊಂದಿಗೆ ಯಶಸ್ವಿಯಾಗಿ ಮುನ್ನಡೆದಿದೆ. ಇದೀಗ ಮಳಿಗೆಯಲ್ಲಿ ಎಲ್ಲಾ ವಯೋಮಾನದವರಿಗೆ ಒಪ್ಪುವ ಬ್ರಾಂಡೆಡ್ ಹಾಗೂ ಇತರ ವಸ್ತ್ರಗಳ ಅಪೂರ್ವ ಸಂಗ್ರಹವೇ ಬಂದಿದೆ.

ಗುಣಮಟ್ಟದ ಬಟ್ಟೆಯ ಜೊತೆಗೆ ಮಿತ ದರವೂ ಇವರ ಶೀತಲ್ ಕಲೆಕ್ಷನ್ನ ಹೈಲೈಟ್ಸ್ ಇದರಿಂದ ಶೀತಲ್ ಗ್ರಾಹಕರ ಜನಪ್ರಿಯ ಮಳಿಗೆಯಾಗಿಸಿದೆ.
20ನೇ ವರ್ಷದಲ್ಲಿ ಸಂಸ್ಥೆ ಮುನ್ನಡೆಯುವ ಕಾರಣ ಸಂಸ್ಥೆ ಆಕರ್ಷಕವಾಗಿ ನವೀಕರಣಗೊಳ್ಳುತ್ತಿದೆ. ಅಲ್ಲದೆ ಆಕರ್ಷಕ ಆಫರ್ ಹಾಗೂ ದರ ಕಡಿತ ಮಾರಾಟ ನಡೆಯುತಿದೆ. ಫೆ.9ರಿಂದ ಫೆ.28ರ ತನಕ ಪ್ರತಿ ಖರೀದಿಗೆ ಶೇ.30ರವರೆಗೆ ದರ ಕಡಿತ ಮಾರಾಟವನ್ನೂ ಘೋಷಿಸಿದೆ. ಅಲ್ಲದೆ ಫೆ.9ರಿಂದ ಬಟ್ಟೆಗಳ ಖರೀದಿಗೆ ಗಿಫ್ಟ್ ಕೂಪನ್ ನೀಡಲಾಗುತ್ತದೆ. ಸೆಪ್ಟ್ಂಬರ್ ತಿಂಗಳಲ್ಲಿ ಈ ಗಿಪ್ಟ್ ಕೂಪನ್ ಡ್ರಾ ನಡೆಯಲಿದ್ದು ಗ್ರಾಹಕರಿಗೆ ಅಕರ್ಷಕ ಬಂಪರ್ ಬಹುಮಾನ ಗೆಲ್ಲುವ ಅವಕಾಶ ಇದೆ.
