ಧರ್ಮಸ್ಥಳ:ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜೂ.24 ರಂದು ಸೋಮವಾರ ಬೆಳಗ್ಗೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಜೊತೆಯಲ್ಲಿ ದೇವರ ದರ್ಶನ ಪಡೆದ ಬಳಿಕ
ದೇವಾಲಯದಲ್ಲಿ ಧರ್ಮಾಧಿಕಾರಿಗಳು ಯಡಿಯೂರಪ್ಪನವರನ್ನು ಗೌರವಿಸಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ದ.ಕ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಧರ್ಮಸ್ಥಳ ದೇವಸ್ಥಾನದ ಮ್ಯಾನೇಜರ್ ಪಾರ್ಶನಾಥ್, ಧರ್ಮಸ್ಥಳದ ಪಿ.ಎಸ್.ಕೃಷ್ಣ ಸಿಂಗ್ ಜೊತೆಯಲ್ಲಿದ್ದರು.