ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಾವಳಿಯ ಎರಡನೇ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯ ತಂಡವನ್ನು ಸೋಲಿಸಿದ ಭಾರತ
ಫೈನಲ್ ಪ್ರವೇಶಿಸಿತು.ನವೀ ಮುಂಬೈಯ ಡಾ. ಡಿ.ವೈ. ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ನಡೆದ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಆಸ್ಟೇಲಿಯಾ ತಂಡವು
49.5 ಓವರ್ ಗಳಲ್ಲಿ 338 ರನ್ ಗಳಿಸಿ ಆಲೌಟ್ ಆಯಿತು. ಗುರಿ ಬೆನ್ನತ್ತಿದ ಭಾರತ ತಂಡವು 9 ಎಸೆತ ಬಾಕಿ ಇರುವಂತೆ 5 ವಿಕೆಟ್ ನಷ್ಟಕ್ಕೆ 341 ರನ್ ಗಳಿಸಿ ಫೈನಲ್ ಪ್ರವೇಶಿಸಿತು.ಜೆಮಿಮಾ ರಾಡ್ರಿಗಸ್ ಭರ್ಜರಿ ಶತಕದ ನೆರವಿನಿಂದ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಗೆದ್ದು ಫೈನಲ್ ಗೆ ಎಂಟ್ರಿಕೊಟ್ಟಿದೆ. ಕಠಿಣ ಸವಾಲು ಪಡೆದ ಭಾರತ ತಂಡಕ್ಕೆ ಆರಂಭ ಉತ್ತಮವಾಗಿರಲಿಲ್ಲ. ಆದರೆ, ಜೆಮಿಮಾ ಆಡಿದ ಇನ್ನಿಂಗ್ಸ್ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿತು. ಶೆಫಾಲಿ ವರ್ಮ ಕೇವಲ 10 ರನ್ ಬಾರಿಸಿ ಔಟಾದರೆ, ಅನುಭವಿ ಆಟಗಾರ್ತಿ ಸ್ಮೃತಿ ಮಂದನಾ 24 ರನ್ ಬಾರಿಸಿ ಔಟಾದರು.ಹರ್ಮನ್ಪ್ರೀತ್ ಕೌರ್ 88 ಎಸೆತಗಳ
ಇನ್ನಿಂಗ್ಸ್ನಲ್ಲಿ 10 ಬೌಂಡರಿ, 2 ಸಿಕ್ಸರ್ನೊಂದಿಗೆ 89 ರನ್ ಬಾರಿಸಿದರು. ಇದರಿಂದಾಗಿ ಜೆಮಿಮಾ ಜೊತೆ ಮೂರನೇ ವಿಕೆಟ್ಗೆ 156 ಎಸೆತಗಳಲ್ಲಿ 167 ರನ್ಗಳ ಭರ್ಜರಿ ಜೊತೆಯಾಟವಾಡಿದರು. ಜೆಮಿಮಾ 134 ಎಸೆತಗಳಲ್ಲಿ14 ಬೌಂಡರಿ ಸಹೀತ ಅಜೇಯ 127 ರನ್ ಬಾರಿಸಿ ತಂಡವನ್ನು ಗಲಿವಿನ ದಡ ಸೇರಿಸಿದರು. ದೀಪಾ ಶರ್ಮ (24), ರಿಚ್ಚಾ ಘೋಷ್(26) ಅಮನ್ಜೋತ್ ಕೌರ್(15) ಅಮೂಲ್ಯ ಕೊಡುಗೆ ನೀಡಿದರು. ಇದಕ್ಕೂ ಮುನ್ನ ಪೋಬ್ ಲಿಚ್ಫೀಲ್ಡ್(119) ಶತಕ ಹಾಗೂ ಎಲ್ಲೀಸ್ ಫೆರಿ(77), ಅಷ್ಲೇಗ್ ಗಾರ್ನರ್(63) ಅರ್ಧ ಶತಕದ ನೆರವಿನಿಂದ ಆಸ್ಟ್ರೇಲಿಯಾ ಬೃಹತ್ ಮೊತ್ತ ಪೇರಿಸಿತು.















