*ಅನಿಲ್ ಹೆಚ್.ಟಿ.
2018-2019 ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ 28 ಮಂದಿಯನ್ನು ಕಳೆದುಕೊಂಡ ದುರಂತ ಕೊಡಗಿನವರ ಮನದಲ್ಲಿ ಇನ್ನೂ ಹಸಿರಾಗಿಯೇ ಇದೆ,ಈ ಬಾರಿಯೂ ರಕ್ಕಸ ಮಳೆ ಕೊಡಗಿನಲ್ಲಿ ಸುರಿಯುತ್ತಿರುವಾಗಲೇ ಕೊಡಗಿನ ಗಡಿಭಾಗದ ಅಂದರೆ ಕೊಡಗು ಜಿಲ್ಲೆಯ ಕುಟ್ಟದಿಂದ ಎರಡು ಗಂಟೆ ಕ್ರಮಿಸಿದರೆ ಸಿಗುವ ವಯನಾಡು ಜಿಲ್ಲೆಯಲ್ಲಿ ಕಂಡುಕೇಳರಿಯದ ಭೂಕುಸಿತವಾಗಿದೆ,
ಕೇರಳದ ಇತಿಹಾಸದಲ್ಲಿಯೇ ಇಂಥ ಪ್ರಾಕೖತ್ತಿಕ ದುರಂತ ಇದೇ ಮೊದಲು.. ಹೀಗಾಗಿಯೇ ದೇವರ ಸ್ವಂತ ಭೂಮಿ ಎಂಬ ಹೆಗ್ಗಳಿಕೆಯ ಕೇರಳ ರಾಜ್ಯ ಈ ದುರಂತದಿಂದ
ದಂಗಾಗಿದೆ, ಆತಂಕಕ್ಕೊಳಗಾಗಿದೆ,ವಯನಾಡು ಜಿಲ್ಲೆಯ ಮೂರು ಗ್ರಾಮಗಳು ಅಕ್ಷರಶ ಮಣ್ಣಿನಡಿ ಸಿಲುಕಿದೆ, ಈ ಮೂರು ಗ್ರಾಮಗಳಿಗೆ ಸೇರಿದ 450 ಕುಟುಂಬಗಳ ಸದಸ್ಯರನ್ನು ಪತ್ತೆ ಹಚ್ಚುವ ಕಾಯ೯ ಬಿರುಸಿನಿದ ನಡೆದಿದೆ,
ಮಧ್ಯರಾತ್ರಿ 1 ಗಂಟೆಗೆ ಬಿದ್ದ ಗುಡ್ಡದಡಿ ಸಿಲುಕಿದ ಗ್ರಾಮಕ್ಕೆ ರಕ್ಷಣಾ ಪಡೆಗಳು 11 ಗಂಟೆ ಬಳಿಕ ತಲುಪಲು ಸಾಧ್ಯವಾಯಿತು ಎಂದರೆ ಅಲ್ಲಿನ ಪರಿಸ್ಥಿತಿ ಯೋಚಿಸಿ.ಕಾಲಿಟ್ಟಲ್ಲೆಲ್ಲಾ ಗೊಸರು ಮಣ್ಣು, ಗುಂಡಿಗಳು, ಪ್ರವಾಹದಂತೆ ಹರಿಯುತ್ತಿರುವ ನೀರು,, ಮರಗಳು, ರೆಂಬೆ, ಕೊಂಬೆಗಳ ರಾಶಿ,, ಜತೆಗೇ ಬೖಹತ್ ಬಂಡೆಗಳು ಸಾಲುಸಾಲಾಗಿ ಕಿಲೋಮೀಟರ್ ಗಟ್ಟಲೆ ಪ್ರದೇಶದಲ್ಲಿ ಬಿದ್ದಿವೆ,

ಇದೆಲ್ಲವನ್ನೂ ದಾಟಿಕೊಂಡು ಎನ್ ಡಿಆರ್ ಎಫ್, ಸೇನಾ ಪಡೆಗಳ 250 ಮಂದಿ ಸಾಹಸದಿಂದ ಸಾಗಬೇಕಾಗಿದೆ, 2 ಹೆಲಿಕಾಪ್ಟರ್ ಗಳು ಘಟನಾ ಸ್ಥಳದ ಮೇಲೆ ಹಾರಾಡುತ್ತಾ ಕಟ್ಟಡದ ಮೇಲೆ ನಿಂತು ಜೀವ ಉಳಿಸಿಕೊಂಡವರನ್ನು ಮೇಲೆತ್ತುವ ಕಾಯ೯ದಲ್ಲಿ ತೊಡಗಿಸಿಕೊಂಡಿದೆ,
ಆದರೂ ಇನ್ನೂ ಸುರಿಯುತ್ತಲೇ ಇರುವ ಮಹಾಮಳೆ ಹೆಲಿಕಾಪ್ಟರ್ ಹಾರಾಟಕ್ಕೆ, ರಕ್ಷಣಾ ಕಾಯಾ೯ಚರಣೆಗೆ ಅಡ್ಡಿಯುಂಟು ಮಾಡುತ್ತಲೇ ಇದೆ,
450 ಕುಟುಂಬಗಳು ಎಂದರೆ ಕನಿಷ್ಟ 1500 ಮಂದಿಯಾದರೂ ಈ 3 ಗ್ರಾಮಗಳಲ್ಲಿ ಜೀವಿಸುತ್ತಿದ್ದರು, ಈ ಪೈಕಿ ಜೀವಂತ ಉಳಿದವರ ಲೆಕ್ಕ ಹಾಕುವ ಕೆಲಸವೂ ಸಾಗಿದೆ,
ಸದ್ಯಕ್ಕೆ 125ಕ್ಕೂ ಅಧಿಕ ಮಂದಿಯ ಮೖತದೇಹಗಳು ದೊರಕಿದೆ, ಸ್ಥಳದಲ್ಲಿ ಮಾತ್ರವಲ್ಲ, ಭೂಕುಸಿತ ಉಂಟಾದ ಗ್ರಾಮಗಳಿಂದ 80 -90 ಕಿಲೋಮೀಟರ್ ದೂರದಲ್ಲಿಯೂ ಮೖತದೇಹಗಳು ಪತ್ತೆಯಾಗುತ್ತಿದೆ,
ರಕ್ಷಣಾ ಪಡೆಯ ಸಿಬ್ಬಂದಿಗಳು ಕಾಲಿಟ್ಟ ಮಣ್ಣಿನಡಿಯೇ ದೇಹಗಳು ಗೋಚರಿಸುತ್ತಿದೆ, ಜೀವಂತ ಉಳಿದವರನ್ನು ಹಾಗೂ ಹೀಗೂ ಮೇಲೆತ್ತುವ ಕಾಯ೯ ನಡೆಯುತ್ತಿರುವುದು ಒಂದೆಯಾದರೆ ಶವಗಳನ್ನು ಘಟನಾ ಸ್ಥಳದಿಂದ ಸಾಗಿಸುವ ಕಾಯ೯ದಲ್ಲಿಯೂ ರಕ್ಷಣಾ ಪಡೆಗಳು ಸ್ಥಳೀಯರ ಸಹಕಾರದಿಂದ ನಿರತವಾಗಿದೆ.

ವಯನಾಡು ಜಿಲ್ಲಾ ಸಕಾ೯ರಿ ಆಸ್ಪತ್ರೆ ಮಸಣದಂತೆ ಗೋಚರವಾಗುತ್ತಿದೆ, ಎಲ್ಲೆಲ್ಲೂ ಶವಗಳು, ಗಾಯಗೊಂಡವರು, ರಕ್ತಸಿಕ್ತ ದೇಹಗಳು, ಕೈಕಾಲು ಕಳೆದುಕೊಂಡವರು,, ಹೀಗೆ ವಿಕೋಪಕ್ಕೆ ಸಾಕ್ಷಿ ಹೇಳುವಂತೆ ಈ ಆಸ್ಪತ್ರೆ ಕಂಡುಬಂದಿದೆ,
ಅಪ್ಪ ಎಲ್ಲಿ, ಅಮ್ಮ ಎಲ್ಲಿ ಎಂದು ಗೋಳಿಡುತ್ತಾ ಹುಡುಕಾಟ ನಡೆಸಿರುವ ಮಕ್ಕಳು, ತಮ್ಮ ಕುಟುಂಬದ ಸದಸ್ಯರನ್ನು ಗಾಭರಿಯಿಂದಲೇ ಅರಸುತ್ತಿರುವ ನೂರಾರು ಮಂದಿ..
ಬದುಕಿದವರ ಲೆಕ್ಕ ಇಡುವುದೋ ಸತ್ತವರ ಲೆಕ್ಕ ತೆಗೆಯುವುದೋ ಎಂಬ ಗೊಂದಲದಲ್ಲಿರುವ ಸಕಾ೯ರದ ನೂರಾರು ಸಿಬ್ಬಂದಿಗಳು,
ವಯನಾಡು ಎಂಬ ಸುಂದರ ಗುಡ್ಡದ ಊರೀಗ ಭಯಾನಕ ದುರಂತಕ್ಕೆ ಸಾಕ್ಷಿ ಹೇಳುವಂತಿದೆ,
ಮೂರೂ ಊರುಗಳಲ್ಲಿನ ದೇವಾಲಯ, ಮಸೀದಿ, ಚಚ್೯ಗಳು, ಮನೆಗಳ ಸಹಿತ ಅವಷೇಶವೂ ಇಲ್ಲದಂತೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ, ಬಂಡೆಕಲ್ಲುಗಳ ಮೇಲೆ ಲಕ್ಷಾಂತರ ಮೌಲ್ಯದ ಕಾರ್, ಜೀಪುಗಳು ಕೆಸರಿನಿಂದ ತುಂಬಿಕೊಂಡು ಪರಿಸ್ಥಿತಿಯ ವ್ಯಂಗ್ಯದಂತೆ ಕಾಣುತ್ತಿದೆ,
‘ಉಸಿರಿರುವ ಪ್ರಾಣವನ್ನೇ ಕೇಳುವವರಿಲ್ಲದ ದುಸ್ಥಿತಿಯಲ್ಲಿ,
ಈ ವಾಹನಗಳ ಸ್ಥಿತಿ ಕೇಳುವವರಾರು?

ಹಸು, ಎಮ್ಮೆ, ಬಾತು, ಕೋಳಿ, ಹಂದಿ ಸೇರಿದಂತೆ ಮನೆಯ ಜಾನುವಾರುಗಳು ನೀರಿನಲ್ಲಿ ತೇಲುತ್ತಾ ಪ್ರಾಣ ಬಿಟ್ಟಿವೆ,
ಬೆಟ್ಟ ಕುಸಿದು ಉಂಟಾದ ಪ್ರವಾಹಕ್ಕೆ ಸಿಲುಕಿದ ಕಾಡಾನೆ, ಹುಲಿ, ಚಿರತೆಯಂಥ ವನ್ಯಜೀವಿಗಳೂ ಪ್ರವಾಹದಲ್ಲಿ ಸಿಲುಕಿ ಜೀವ ರಕ್ಷಣೆಗಾಗಿ ಹರಸಾಹಸ ಪಡುತ್ತಿದೆ.
ಇಷ್ಟಕ್ಕೂ ಅಲ್ಲಿ ಏನಾಯಿತೆಂದರೆ..?
ಮೆಪ್ಪಾಡಿ ಚೂರಲ್ ಮಲ, ಮುಂಡಕೈ ಎಂಬುದು ವಯನಾಡು ಜಿಲ್ಲೆಗೆ ಸೇರಿದ ಗ್ರಾಮಗಳು, ಈ ವ್ಯಾಪ್ತಿಯಲ್ಲಿ 48 ಗಂಟೆಗಳಿಂದ ಸತತ ಧಾರಾಕಾರ ಮಳೆಯಾಗುತ್ತಿತ್ತು, ಜನ ಭಯಭೀತರಾಗಿದ್ದರು, ಮುಂಜಾಗ್ರತೆ ವಹಿಸಿದ್ದ ಕೆಲವರು ಊರು ಬಿಟ್ಟು ಬಚಾವಾಗಿದ್ದಾರೆ,
ಮಂಗಳವಾರ ಬೆಳಗ್ಗಿನ ಜಾವ ರಾತ್ರಿ 1 ಗಂಟೆಗೆ ಮುಂಡಕೈ ಪೇಟೆಯಲ್ಲಿ ಮೊದಲ ಭೂಕುಸಿತ ಭಾರೀ ಸ್ಪೋಟದ ನಂತರ ಉಂಟಾಯಿತು,
ತಡಮಾಡದೇ ತಡರಾತ್ರಿಯಲ್ಲಿಯೂ ಬೆಟ್ಟದಡಿ ಸಿಲುಕಿದವರ ರಕ್ಷಣಾ ಕಾಯ೯ ಮಹಾಮಳೆಯಲ್ಲಿಯೇ ಪ್ರಾರಂಭವಾಯಿತು,
ಆದರೆ ಮತ್ತೆ 4 ಗಂಟೆ ವೇಳೆಗೆ ಸಂಭವಿಸಿದ ಮತ್ತೊಂದು ಭಾರೀ ಭೂಕುಸಿತದಲ್ಲಿ ಈ ಚೂರಲ್ ಮಲ ಗ್ರಾಮವೇ ಬೆಟ್ಟಗಳ ಮಣ್ಣು, ನೀರಿನಿಂದ ಕೊಚ್ಚಿಕೊಂಡು ಹೋಯಿತು, ಗಾಯಾಳು ಗ್ರಾಮಸ್ಥರ ಜತೆಗೇ ರಕ್ಷಣಾ ಕಾಯ೯ದಲ್ಲಿ ನಿರತರಾಗಿದ್ದವರೂ ಕೊಚ್ಚಿಕೊಂಡು ಹೋದ ದುರಂತ ಸಂಭವಿಸಿತ್ತು

ನಿನ್ನೆ ಮುಂಜಾನೆ 4 ಗಂಟೆಯವರೆಗೆ ಇದ್ದ ಚೂರಲ್ ಮಲ ಎಂಬ ಗ್ರಾಮ ಇಂದು 4 ಗಂಟೆಯ ನಂತರ ನಾಪತ್ತೆಯಾಗಿಬಿಟ್ಟಿದೆ, ಜತೆಗೇ ತನ್ನೂರಿನ ಜನರನ್ನೂ ನೀರಿನಲ್ಲಿ ಕೊಚ್ಚಿಕೊಂಡು ಇತಿಹಾಸದ ದುರಂತ ಪುಟಗಳಲ್ಲಿ ಮರೆಯಾಗಿಬಿಟ್ಟಿದೆ,ಮುಂಡಕೈ ಎಂಬ ಗ್ರಾಮ ತಲುಪಲು ಇದ್ದ ಏಕೈಕ ಸೇತುವೆಯೇ ಪ್ರವಾಹದಲ್ಲಿ ಕೊಚ್ಚಿಕೊಂಡು ಕಣ್ಮರೆಯಾಗಿದೆ, ಹೀಗಾಗಿ ರಕ್ಷಣಾ ಪಡೆಗಳು ಪ್ರವಾಹ ದಾಟಿ ಊರಿದ್ದ ಜಾಗಕ್ಕೆ ಸೇರಲು ತಾತ್ಕಾಲಿಕ ಸೇತುವೆ ನಿಮಿ೯ಸಬೇಕಾಯಿತು,ಪ್ರಕೖತ್ತಿ ವಿಕೋಪ ಸ್ಥಳದಿಂದ ಸದ್ಯಕ್ಕೆ 3,800 ಮಂದಿಯನ್ನು ಶಿಬಿರಗಳಲ್ಲಿ ಇರಿಸಲಾಗಿದೆ,
ಮಂಗಳವಾರ ಸಂಜೆಯೂ ದೂರದೂರದ ಗ್ರಾಮವ್ಯಾಪ್ತಿಯಲ್ಲಿ ಕಂಡುಬರುತ್ತಿರುವ ಪ್ರವಾಹದ ಮಣ್ಣಿನಡಿ, ಮರಗಳಡಿ, ಕಲ್ಲುಗಳಡಿಯಲ್ಲಿ ಸಹಾಯಕ್ಕಾಗಿ ಎತ್ತುತ್ತಿರುವ ಕೈಗಳನ್ನು ಕಂಡು ಸ್ಥಳೀಯರು ಅಂಥವರನ್ನು ರಕ್ಷಿಸುತ್ತಿದ್ದಾರೆ, ಈ ರೀತಿ ರಕ್ಷಿಸಲ್ಪಟ್ಟವರು ಕೈಕಾಲು ಕಳೆದುಕೊಂಡು ಉಸಿರು ಮಾತ್ರ ಮುಂದುವರೆಸಿದ ಪರಿಸ್ಥಿತಿಯಲ್ಲಿದ್ದಾರೆ,
ಮಣ್ಣಿನಡಿ ಸಿಲುಕಿ ಬಚಾವ್ ಆದವರು ಕೂಡ ಈಗ ಮಾನಸಿಕ ಆಘಾತಕ್ಕೊಳಗಾಗಿದ್ದಾರೆ.
ಇನ್ನೂ ಅನೇಕ ಗ್ರಾಮಗಳಲ್ಲಿ ಜನರು ತಮ್ಮ ಜೀವ ಸಂರಕ್ಷಣೆಗಾಗಿ ಕಾಯುತ್ತಿದ್ದಾರೆ,ಇಂಥ ನೂರಾರು ಜನರ ಬಳಿ ತೆರಳಲು ರಕ್ಷಣಾ ಪಡೆಗಳು ಇನ್ನೂ ಹರಸಾಹಸ ಪಡುತ್ತಿದೆ,ಟೀ ತೋಟಗಳ ಕಾಮಿ೯ಕರು, ಮಾಲೀಕರು ವ್ಯಾಪಾರಿಗಳು,,, ಪ್ರವಾಸೋದ್ಯಮ ನೆಚ್ಚಿಕೊಂಡವರು,,
ಹೀಗೆ ಸಮಾಜದ ನಾನಾ ವಗ೯ದ ಜನರನ್ನು ಹೊಂದಿದ್ದ ಈ ಮೂರೂ ಗ್ರಾಮಗಳಲ್ಲಿ ಈಗ ಶೋಕ ನೆಲಸಿದೆ ಎನ್ನುವಂತಿಲ್ಲ,
ಯಾಕೆಂದರೆ..ದುರಂತದ ಶೋಕ ಮನೆ ಮಾಡಲು ಈ ಗ್ರಾಮಗಳಲ್ಲಿ ಮನೆಗಳೇ ಈಗಿಲ್ಲ,
ಮನೆಗಳೇ ಕಣ್ಮರೆಯಾದ ಮೇಲೆ ಗ್ರಾಮ ಎಲ್ಲಿರುತ್ತದೆ? ಎಲ್ಲವೂ ನೀರು ಪಾಲಾಗಿದೆ..

ಆದ್ರೆ…
ಪ್ರಾಕೖತ್ತಿಕ ದುರಂತಗಳು ಸಂಭವಿಸಿದಾಗ ಎಲ್ಲರೂ ಇದಕ್ಕೆ ನಾನಾ ಕಾರಣ ಹೇಳುತ್ತಾರೆ,
ಪ್ರಕೖತ್ತಿಯನ್ನು ಸಂರಕ್ಷಿಸದಿರುವುದೇ ಇದಕ್ಕೆಲ್ಲಾ ಕಾರಣ ಎನ್ನುತ್ತಾರೆ, ..
ಕೆಲ ದಿನಗಳು ಕಳೆದ ನಂತರ ಮತ್ತೆ ಎಲ್ಲವೂ ಸಾಮಾನ್ಯವಾಗುತ್ತದೆ,
ನದಿಗಳಲ್ಲಿ ಕೆಸರು ನೀರು ಮರೆಯಾಗಿ ಹೊಸ ನೀರು ಹರಿಯುತ್ತದೆ,
ಬೆಟ್ಟಗಳಲ್ಲಿ ಮಣ್ಣು ಕುಸಿತ ಕಣ್ಮರೆಯಾಗಿ ಹೊಸ ಹಸಿರು ಚಿಗುರುತ್ತದೆ,,,
ಬಿದ್ದ ಬಂಡೆಗಳನ್ನೇ ಆಸರೆಯಾಗಿಸಿ ನವ ಜೀವನ ಕಟ್ಟಿಕೊಳ್ಳುತ್ತದೆ,,,
ಎಲ್ಲವೂ ಮರೆಯಾಗುತ್ತದೆ.. ಎಲ್ಲವೂ ಮನದಿಂದ ಮಾಸಿಹೋಗುತ್ತದೆ,..
ಮತ್ತೊಂದು ಭೂಕುಸಿತ.., ಮತ್ತೊಂದು ಪ್ರಕೖತ್ತಿ ದುರಂತ… ಸಂಭವಿಸುವವರೆಗೆ..
ಭೂಮಾತೆ ಕಲಿಸುವ ಪಾಠವನ್ನು ಕಲಿಯುವಲ್ಲಿಯವರೆಗೆ ಇಂಥ ದುರಂತಗಳು ಸಂಭವಿಸುತ್ತಲೇ ಇರುತ್ತದೆ,
ಸತ್ತವರ ಲೆಕ್ಕ ಸಿಗುತ್ತದೆ, ಗಾಯಗೊಂಡವರ ಲೆಕ್ಕ ದೊರಕುತ್ತದೆ, ಹಾನಿಯಾದ ಮೌಲ್ಯಕ್ಕೆ ಪರಿಹಾರ ಸಿಗುತ್ತದೆ,
ಕಾಣೆಯಾದ ಪ್ರಕೖತ್ತಿ ಮರಳಿ ದೊರಕುವುದುಂಟೇ.. ಭೂದೇವಿ ತೇಲಿಸಿಕೊಂಡು ಹೋದ ಜೀವಗಳಂತೆ?
ದೇವರ ಸ್ವಂತ ನಾಡಿನಲ್ಲಿ ಸೖಷ್ಟಿಯಾದ ದುರಂತಕ್ಕೆ ತೆತ್ತ ಬೆಲೆಯಿಂದ ಎಚ್ಚೆತ್ತು ಇನ್ನಾದರೂ ನಿಸಗ೯ ಸಂರಕ್ಷಣೆಯ ಪಾಠ ಕಲಿಯೋಣವೇ?
ನೀವೇ ಹೇಳಿ,,,,!!!

ಅನಿಲ್ ಎಚ್.ಟಿ.
(ಅನಿಲ್.ಎಚ್.ಟಿ.ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು)