ಬಂದಡ್ಕ: ಗಡಿ ಪ್ರದೇಶವಾದ ಬಂದಡ್ಕದಲ್ಲಿ ಬಂದಡ್ಕ ಗಡಿನಾಡ ಕನ್ನಡಿಗರ ಸಂಘದ ವತಿಯಿಂದ ನಿರ್ಮಾಣವಾದ ಸಾಂಸ್ಕೃತಿಕ ಭವನದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಬಂದಡ್ಕ ಗಡಿನಾಡ ಕನ್ನಡಿಗರ ಸಂಘದ ಅಧ್ಯಕ್ಷ ಪುರುಷೋತ್ತಮ ಬೊಡ್ಡನಕೊಚ್ಚಿ ವಹಿಸಿದ್ದರು.ಕುತ್ತಿಕೋಲ್ ಗ್ರಾ. ಪಂ. ಅಧ್ಯಕ್ಷೆ ಶೋಭನ ಕುಮಾರಿ ನೂತನ ಸಾಂಸ್ಕೃತಿಕ ಭವನವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ

ಕುತ್ತಿಕೋಲ್ ಗ್ರಾಪಂ.ಸದಸ್ಯೆ ಶೋಭನ ಬಾಲಚಂದ್ರನ್, ಬೆಂಗಳೂರು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ. ಆರ್. ಸುಬ್ಬಯ್ಯ ಕಟ್ಟೆ, ಬಂದಡ್ಕ ಶ್ರೀ ಸುಬ್ರಮಣ್ಯ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಶುಭಶ್ಚಂದ್ರ ರೈ, ಪ್ರೊ. ಶ್ರೀನಾಥ್, ಹಿರಿಯರಾದ ಕೊಯಿಂಗಾಜೆ ಕೃಷ್ಣಪ್ಪ ಗೌಡ ಉಪಸ್ಥಿತರಿದ್ದರು.
ನಿತ್ಯಾನಂದ ಸ್ವಾಗತಿಸಿ, ವಿಶುಕುಮಾರ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.













