ಸುಳ್ಯ:ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಆಶ್ರಯದಲ್ಲಿ ಯುವಜನ ಸಂಯುಕ್ತ ಮಂಡಳಿಯ ಸಹಕಾರದಲ್ಲಿ ನಡೆದ ವಾಲಿಬಾಲ್ ತರಬೇತಿ ಶಿಬಿರದ ಸಮಾರೋಪ ಮತ್ತು ಹೊನಲು ಬೆಳಕಿನ ಪುರುಷರ ತಾಲೂಕು ವಾಲಿಬಾಲ್ ಪಂದ್ಯಾಟ ನಡೆಯಿತು. ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ ವಿ ಪಂದ್ಯಾಟ ಉದ್ಘಾಟಿಸಿದರು.ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ರಾಜ್ಯ ವಾಲಿಬಾಲ್
ಅಸೋಸಿಯೇಶನ್ ಅಸೋಸಿಯೇಟ್ ಸೆಕ್ರೆಟರಿ ಎನ್ ಜಯಪ್ರಕಾಶ್ ರೈ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ಬಿ ಇದರ ಮುಖ್ಯಕಾರ್ಯನಿರ್ವಾಹನಾಧಿಕಾರಿ ಡಾ.ಉಜ್ವಲ್ ಯು ಜೆ, ದ. ಕ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಕುಮಾರ್, ಸೂಡ ಅಧ್ಯಕ್ಷ ಕೆ ಎಂ ಮುಸ್ತಫಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ
ಡಾ. ಲೀಲಾಧರ್ ಡಿ ವಿ, ಡಾ. ಉಜ್ವಲ್ ಯು ಜೆ, ರಾಷ್ಟ್ರೀಯ ವಾಲಿಬಾಲ್ ತರಬೇತುದಾರ ರಾಜೇಶ್ ಪತ್ತಾರ್, ಸಹ ತರಬೇತುಧಾರರಾದ ರಾಜೀವಿ ಲಾವಂತಡ್ಕ, ಜಯಪ್ರಕಾಶ್ ಕುಡೆಕಲ್ಲು, ಸುದರ್ಶ ಕೆ ಎಸ್ ಅವರನ್ನು ಸನ್ಮಾನಿಸಲಾಯಿತು.

ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಎನ್ ಎ ರಾಮಚಂದ್ರ, ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಮಾಧವ ಬಿ ಕೆ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ವಲಯ ಅರಣ್ಯಾಧಿಕಾರಿ ಮಂಜುನಾಥ್, ವಾಲಿಬಾಲ್ ಅಸೋಸಿಯೇಶನ್ ಗೌರವಾಧ್ಯಕ್ಷ ಎಸ್. ಸಂಶುದ್ದಿನ್ ಎಸ್, ಚೋಕ್ಕಾಡಿ ವಿದ್ಯಾ ಸಂಸ್ಥೆಯ ಸಂಚಾಲಕ ರಾಧಾಕೃಷ್ಣ ಬೊಳ್ಳೂರು, ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪ ಗೌಡ ಯುವಜನ,ಸಂಯುಕ್ತ ಮಂಡಳಿ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ, ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಲ ನಿರ್ದೇಶಕ ಚಂದ್ರ ಕೋಲ್ಚಾರ್, ಕೋಟೆಕ್ಕಲ್ ಆಯುರ್ವೇದ ಶಾಲೆಯ ಡಾ. ಪ್ರಶಾಂತ್ ಕುಮಾರ್, ವಾಲಿಬಾಲ್ ಅಸೋಸಿಯೇಶನ್ ಗೌರವ ಸಲಹೆಗಾರರಾದ ಹರೀಶ್ ರೈ ಉಬರಡ್ಕ, ಮೂಸಾ ಕುಂಞಿ ಪೈಂಬೆಚ್ಚಾಲ್, ನಗರ ಪಂಚಾಯತ್ ಸದಸ್ಯ ರಾಜು ಪಂಡಿತ್, ವಾಲಿಬಾಲ್ ಅಸೋಸಿಯೇಶನ್ ನಿರ್ದೇಶಕರಾದ ಗೋಕುಲ್ ದಾಸ್ ಸುಳ್ಯ, ಶಾಫಿ ಕುತ್ತಮೊಟ್ಟೆ, ಚೇತನ್ ಕಜೆಗದ್ದೆ, ವಾಲಿಬಾಲ್ ಅಶೋಸಿಯೇಷನ್ ಕೋಶಾಧಿಕಾರಿ ಕೆ ಬಿ ಇಬ್ರಾಹಿಂ, ನಿರ್ದೇಶಕ ರಜ್ಜು ಬಯ್ಯ, ಇರ್ಫಾನ್ ಅಹಮ್ಮದ್ ಜನತಾ, ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ, ಅಶ್ರಫ್ ಗುಂಡಿ, ನಿರ್ಣಾಯಕ ಮಂಡಳಿ ಸಂಚಾಲಕ ರಂಗನಾಥ ನಾಗಪಟ್ಟಣ, ಉಪಸ್ಥಿತರಿದ್ದರು. ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕುಡೆಕಲ್ಲು ವಂದಿಸಿದರು. ಶಶಿಧರ್ ಎಂ ಜೆ ಕಾರ್ಯಕ್ರಮ ನಿರೂಪಿಸಿದರು.
ಹೊನಲು ಬೆಳಕಿನ ಪಂದ್ಯಾಟದಲ್ಲಿ ಸುಳ್ಯ ತಾಲೂಕಿನ 18 ಗ್ರಾಮಗಳ 18 ತಂಡಗಳು ಭಾಗವಹಿಸಿದ್ದವು. ಅಜ್ಜಾವರ ತಂಡ ಪ್ರಥಮ ಅಡ್ಕಾರ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಉಪಾಧ್ಯಕ್ಷ ಗೋಕುಲ್ ದಾಸ್, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕುಡೆಕಲ್ಲು, ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ, ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ನಿರ್ದೇಶಕರುಗಳಾದ ಸುದರ್ಶ ಕೆ ಎಸ್, ರಜ್ಜು ಬಯ್ಯ, ಹಾಗೂ ರಜಾಕ್ ರವರು ಉಪಸ್ಥಿತರಿದ್ದರು.