ಸುಳ್ಯ:ಸುಳ್ಯ ಮುಂಗಾರು ವಾಲಿಬಾಲ್ ಅಕಾಡೆಮಿಯ ಆಶ್ರಯದಲ್ಲಿ ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ಆಯೋಜಿಸಿದ್ದ 10 ದಿನಗಳ ವಾಲಿಬಾಲ್ ತರಬೇತಿ ಶಿಬಿರ ಸಮಾಪನಗೊಂಡಿತು.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರದ (ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ ವಹಿಸಿದ್ದರು.ಪತ್ರಕರ್ತ ಹರೀಶ್ ಬಂಟ್ವಾಳ್ ಸಮಾರೋಪ ಭಾಷಣ ಮಾಡಿದರು.ಈ ಸಂದರ್ಭದಲ್ಲಿ
ದ. ಕ. ಜಿಲ್ಲಾ ವಾಲಿಬಾಲ್ ಉಪಾಧ್ಯಕ್ಷ ಎಸ್. ಸಂಶುದ್ದೀನ್, ಉದ್ಯಮಿ ಹರೀಶ್ ಕಾಮತ್, ತಾಲೂಕು ವಾಲಿಬಾಲ್ ಅಸೋಸಿಯೇಷನ್ ಪದಾಧಿಕಾರಿಗಳಾದ ನಿತಿನ್, ಕೆ. ಬಿ. ಇಬ್ರಾಹಿಂ, ಉದ್ಯಮಿ ಗಳಾದ ನಾಸಿರ್ ಕಟ್ಟೆಕ್ಕಾರ್ಸ್, ಗಿರೀಶ್ ಕಲ್ಲುಗದ್ದೆ,ಇಸ್ಮಾಯಿಲ್ ಕುಂಬ್ಳೆಕ್ಕಾರ್ಸ್, ರಫೀಕ್ ವೆಲ್ಕಮ್ ಮೊದಲಾದವರು ಉಪಸ್ಥಿತರಿದ್ದರು
ತರಬೇತುದಾರರಾಗಿದ್ದ ಮಂಗಳೂರು ಶಕ್ತಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜ್ಯ ತರಬೇತುದಾರ ಮನೋಜ್ ಕುಮಾರ್ ಮಾತನಾಡಿದರು. ಮನೋಜ್ ಕುಮಾರ್ ಅವರನ್ನು ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ ಸನ್ಮಾನಿಸಿದರು.
ಶಿಬಿರಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಿಸಲಾಯಿತು.ಶಿಬಿರವನ್ನು ರಿಯಾಜ್ ಕಟ್ಟೆಕ್ಕಾರ್ಸ್, ಅಬ್ದುಲ್ ರಝಕ್ ರಜ್ಜು, ಸಿರಾಜ್,ಇರ್ಫಾನ್ ಜನತಾ, ಝುಬೈರ್ ಶಿಲ್ಪ, ಸುಧಾಕರ್ ಮೊದಲಾದವರು ಸಂಘಟಿ ಸಿದ್ದರು.















