ಸುಳ್ಯ:ಸುಳ್ಯ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ವಿಷು ಆಚರಿಸಲಾಯಿತು. ಬೆಳಗ್ಗೆ ವಿಷು ಕಣಿ ದರ್ಶನ, ವಿಶೇಷ ಪೂಜೆಗಳು ನಡೆಯಿತು. ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ವಿಷು ಪ್ರಯುಕ್ತ

ವಿಷು ಕಣಿ ಇಡಲಾಯಿತು. ಭಕ್ತರು ಆಗಮಿಸಿ ವಿಷು ಕಣಿ ದರ್ಶನ ಪಡೆದರು. ವಿಶೇಷ ಪೂಜೆಗಳು ನಡೆಯಿತು. ಪೆರುವಾಜೆ ಶ್ರೀ ಜಲದುರ್ಗಾ ದೇವಸ್ಥಾನದಲ್ಲಿ ವಿಷು ಆಚರಿಸಲಾಯಿತು. ದೇವರ ಸನ್ನಿಧಿಯಲ್ಲಿ ವಿಷು ಕಣಿ ಸಮರ್ಪಣೆ ಮಾಡಲಾಯಿತು. ಭಕ್ತರು ವಿಷು ಕಣಿ ದರ್ಶನ ಪಡೆದರು.
















