ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಅಂಗಾವಾಗಿ ಭಜನಾ ಸಂಕೀರ್ತನೆ, ಗೀತಗಾಯನ ನಡೆಯಿತು.ಅ.19 ರಂದು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೇನ್ಯ ಇವರಿಂದ ಭಜನಾ ಸಂಕೀರ್ತನೆ ಹಾಗು
ಗೀತ ಸುಧಾ ತೋಟ ಇವರಿಂದ ‘ಭಕ್ತಿ ಗಾಯನ’ ನಡೆಯಿತು. ಮಹಾಪೂಜೆ , ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಗೌರವ ಸಲಹೆಗಾರರು,
ಭಕ್ತಾದಿಗಳು ಪಾಲ್ಗೊಂಡಿದ್ದರು.ಇಂದು(ಅ.20)

ಕಲ್ಮಡ್ಕ ಯುವ ಸ್ಫೂರ್ತಿ ಸೇವಾ ಸಂಘ ಇವರ ವತಿಯಿಂದ ಭಜನಾ ಸಂಕೀರ್ತನೆ. ಹೇಮಸ್ವಾತಿ ಕುರಿಯಾಜೆ ಮತ್ತು ದೇವಿಕ ಕುರಿಯಾಜೆ ಇವರಿಂದ’ಭರತನಾಟ್ಯ’ನಡೆಯಲಿದೆ.
ಅ. 20. ರಂದು ಆಯುಧ ಪೂಜೆ ನಡೆಯುತಿದೆ. ಪೂ. 8ರಿಂದ ವಾಹನ ಪೂಜೆ ಆರಂಭಗೊಂಡಿದ್ದು ಅ. 2.ತನಕ ಹಾಗೂ ಸಂ 5 ರಿಂದ 9.30ರವರೆಗೆ ನಿರಂತರ ವಾಹನ ಪೂಜೆ ನಡೆಯಲಿದೆ. ಉಳಿದ ದಿನಗಳಲ್ಲಿ ಬೆಳಗ್ಗಿನ, ಮಧ್ಯಾಹ್ನ, ರಾತ್ರಿ ಪೂಜೆ ನಂತರ ನಡೆಯಲಿದೆ. ನಿನ್ನೆ ರಾತ್ರಿ ಕೂಡ ಹಲವು ಮಂದಿ ವಾಹನ ಪೂಜೆ ನೆರವೇರಿಸಿದರು.











