ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ಸಂಪನ್ನಗೊಂಡಿತು.ಅ.20. ನಾಗತೀರ್ಥ ಪಂಚಲಿಂಗೇಶ್ವರ
ಮಕ್ಕಳ ಮಕ್ಕಳ ಭಜನಾ ತಂಡ, ಕಲ್ಮಡ್ಕ ಯುವ ಸ್ಫೂರ್ತಿ ಸೇವಾ ಸಂಘದ ವತಿಯಿಂದ
ಭಜನಾ ಸಂಕೀರ್ತನೆ ನಡೆಯಿತು. ಕಲಾ ಸೇವೆಯಲ್ಲಿ ದೇವಿಕ ಕುರಿಯಾಜೆ ಇವರಿಂದ ಭರತನಾಟ್ಯ ನಡೆಯಿತು. ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಇಂದು ಬೆಳಗ್ಗಿನಿಂದ ವಾಹನ ಪೂಜೆ ನಡೆಯಿತು. ರಾತ್ರಿ ನಡೆದ ನವರಾತ್ರಿ ಪೂಜೆಯಲ್ಲಿ ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.ದೇಗುಲದ

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮಾಯಿಲಪ್ಪ ಗೌಡ ಎಣ್ಮೂರು, ಸಂತೋಷ್ ಕುಮಾರ್ ರೈ ಬಳ್ಪ, ಧರ್ಮಣ್ಣ ನಾಯ್ಕ ಗರಡಿ, ಸತ್ಯನಾರಾಯಣ ಭಟ್ ಕಾಯಂಬಾಡಿ, ಮಾಲಿನಿ ಕುದ್ವ , ಗೌರವ ಸಲಹೆಗಾರರು, ಅರ್ಚಕರು, ಸಿಬ್ಬಂದಿಗಳು, ಭಕ್ತಾದಿಗಳು ಪಾಲ್ಗೊಂಡಿದ್ದರು. ಅ.11ರಂದು ಆರಂಭಗೊಂಡು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದ ನವರಾತ್ರಿ ಉತ್ಸವ ಅ.20ರಂದು ಸಂಪನ್ನಗೊಂಡಿತು.










