ಸುಳ್ಯ:ಸುಳ್ಯ ದಸರಾ ಉತ್ಸವದ ನಾಲ್ಕನೇ ದಿನದ ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಿ ರಮನಾಥ ರೈ ಅವರು ಭೇಟಿ ನೀಡಿ ಶ್ರೀದೇವಿಯ ಅನುಗ್ರಹ ಪಡೆದು ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ
ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಸಾಲು ಹಾಕಿ ರಮಾನಾಥ ರೈ ಅವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಕೆ.ಗೋಕುಲ್ದಾಸ್, ದಸರಾ ಸಮೂಹ ಸಮಿತಿಗಳ ಪದಾಧಿಕಾರಿಗಳಾದ ಬೂಡು ರಾಧಾಕೃಷ್ಣ ರೈ, ರಾಜು ಪಂಡಿತ್, ಸುನಿಲ್ ಕೇರ್ಪಳ, ಹರೀಶ್ ಕಂಜಿಪಿಲಿ, ಚಂದ್ರಶೇಖರ ಪಂಡಿತ್, ತೀರ್ಥರಾಮ ಜಾಲ್ಸೂರು, ನವೀನ್ಚಂದ್ರ ಮತ್ತಿತರರು ಇದ್ದರು.










