ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ 7ನೇ ದಿನದ ನವರಾತ್ರಿ ಪೂಜೆ, ಭಜನಾ ಸಂಕೀರ್ತನೆ, ಕಲಾ ಸೇವೆ ನಡೆಯಿತು. ಶಿವಳ್ಳಿ ಸಂಪದ ಪಂಜ ವಲಯ ರವರಿಂದ ಭಜನಾ ಸಂಕೀರ್ತನೆ ಹಾಗು

ಮಾಸ್ಟರ್ ತನ್ಮಯ್ ಕಿನ್ನಿಕುಮ್ರಿ (ಕರ್ನಾಟಕ ಕಲಾಶ್ರೀ ವಿದುಷಿ ನಯನ,ವಿ ರೈ ಹಾಗೂ ವಿದುಷಿ ಸ್ವಸ್ತಿಕ ಆರ್ ಶೆಟ್ಟಿ ಇವರ ಶಿಷ್ಯ)ಇವರಿಂದ ಭರತನಾಟ್ಯ ನಡೆಯಿತು .ಮಹಾಪೂಜೆ , ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿಯ

ಸದಸ್ಯರು, ಗೌರವ ಸಲಹೆಗಾರರು,ಭಕ್ತಾದಿಗಳು ಪಾಲ್ಗೊಂಡಿದ್ದರು.
ಅ.18 ರಂದು ಶ್ರೀ ಶಾರದಾಂಬಾ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ,ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರ,ಕಲಾಕ್ಷೇತ್ರ ಪಂಜ ಇವರಿಂದ ನಾಟ್ಯ ವೈಭವ ನಡೆಯಲಿದೆ.











