ಸುಳ್ಯ:ಆಲೆಟ್ಟಿ ಗ್ರಾಮದ ಕಲ್ಚರ್ಪಡ ಸಿರಿ ಕುರಲ್ ನಗರ
ಶ್ರೀ ವನದುರ್ಗ ಪರಿವಾರ ದೈವಗಳ ಸಾನಿಧ್ಯ,ಗುಳಿಗೆ ಸಾನಿಧ್ಯದ ಮುಂಭಾಗದಲ್ಲಿ ವಿಷ್ಣುವರ್ಧನ್ ಅಭಿಮಾನಿ ಸಂಘದ ವತಿಯಿಂದ ಶಾಶ್ವತ ಚಪ್ಪರವನ್ನು ಕೊಡುಗೆಯಾಗಿ ನೀಡಲಾಯಿತು.ವಿಷ್ಣುವರ್ಧನ್ ಅಭಿಮಾನಿ
ಸಂಘದ ವತಿಯಿಂದ ಶಾಶ್ವತ ಚಪ್ಪರ ರಚನೆ ಮಾಡಲು ರೂ 30,000 ದೇಣಿಗೆಯಾಗಿ ನೀಡಲಾಯಿತು. ಟ್ರಸ್ಟಿನ ಅಧ್ಯಕ್ಷರಾದ ಗೋಕುಲ್ ದಾಸ್ ಅವರಿಗೆ ಸಂಘದ ಪದಾಧಿಕಾರಿಗಳು ಹಸ್ತಾಂತರ ಮಾಡಿದರು.
ಸಂಘದ ಅಧ್ಯಕ್ಷರಾದ ಹರಿಶ್ಚಂದ್ರ ಪಂಡಿತ್ ಸಂಚಾಲಕರಾದ ಅಬ್ದುಲ್ ಜಬ್ವಾರ್, ಎಂ ಕೆ ಸತೀಶ್ , ರಾಜು ಪಂಡಿತ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ತೀರ್ಥರಾಮ, ದೀಪಕ್ ಪಿ.ಎಸ್ ವಿಷ್ಣು ಸರ್ಕಲ್, ಟ್ರಸ್ಟಿನ ಸಂಚಾಲಕರಾದ ಅಶೋಕ್ ಪಿಚೆಮನೆ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕಲ್ಚರ್ ನಿರ್ದೇಶಕರಾದ ಬಾಲಚಂದ್ರ ರಾಮ ನಾಯಕ್ ಉಪಸ್ಥಿತರಿದ್ದರು













