ಸುಳ್ಯ: ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯಯ ಆಡಳಿತ ಮಂಡಳಿಗೆ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಆಡಳಿತ ಮಂಡಳಿಯ 19 ನಿರ್ದೇಶಕರ ಸ್ಥಾನದಲ್ಲಿ 17 ಮಂದಿ ಅವಿರೋಧವಾಗಿ ಆಯ್ಕೆಯಾದರು. ಎರಡು ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ.
ಚುನಾವಣೆಗೆ 25 ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯುಲು ಕೊನೆಯ ದಿನವಾದ ಇಂದು
8 ಮಂದಿ ನಾಮಪತ್ರ ಹಿಂಪಡೆದ ಕಾರಣ ಅವಿರೋಧ ಆಯ್ಕೆ ನಡೆಯಿತು.
ಸಾಮಾನ್ಯ 13, ಮಹಿಳಾ ಮೀಸಲು 2, ಹಿಂದುಳಿದ ವರ್ಗ ಬಿ 1, ಪರಿಶಿಷ್ಟ ಪಂಗಡ ತಲಾ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು. ಹಿಂದುಳಿದ ವರ್ಗ ಎ ಮತ್ತು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಸಾಮಾನ್ಯ ಮೀಸಲು ಸ್ಥಾನದಿಂದ ನಿತ್ಯಾನಂದ ಮುಂಡೋಡಿ, ಪಿ.ಸಿ. ಜಯರಾಮ, ತೀರ್ಥರಾಮ ಎ.ವಿ, ಸದಾನಂದ ಮಾವಜಿ, ದೊಡ್ಡಣ್ಣ ಗೌಡ ಬಿ, ಸದಾನಂದ ಜಾಕೆ, ಸದಾನಂದ ಕೆ.ಸಿ., ಲಕ್ಷ್ಮೀ ನಾರಾಯಣ ನಡ್ಕ, ಚಂದ್ರ ಕೋಲ್ಚಾರ್, ದಾಮೋದರ ಎನ್.ಎಸ್, ಮೋಹನ್ರಾಮ್ ಸುಳ್ಳಿ, ದಿನೇಶ್ ಮಡಪ್ಪಾಡಿ, ಶೈಲೇಶ್ ಅಂಬೆಕಲ್ಲು ಆಯ್ಕೆಯಾದರು.
ಮಹಿಳಾ ಮೀಸಲು ಕ್ಷೇತ್ರದಿಂದ ನಳಿನಿ.ಎಸ್.ಎಸ್, ಪ್ರೇಮ ಕೆ.ಎಲ್, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಪಿ.ಎಸ್.ಗಂಗಾಧರ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಜಯಲಲಿತ ಕೆ.ಎಸ್ ಆಯ್ಕೆಯಾದರು.
ಡಾ.ಜ್ಞಾನೇಶ್ ಎನ್.ಎ ವೃತ್ತಿಪರ ನಿರ್ದೇಶಕರಾಗಿರುತ್ತಾರೆ.
ನಾಮಪತ್ರ ಸಲ್ಲಿಸಿದ್ದ ಸೋಮಶೇಖರ ಕೆ.ಆರ್, ಹೇಮಚಂದ್ರ ಐ.ಕೆ, ಜ್ಞಾನೇಶ್ ಎನ್.ಎ, ಶ್ರೀಕಾಂತ್ ಎಂ, ಶ್ರೀಹರಿ ಕೆ.ಬಿ.ಕುಕ್ಕುಡೇಲು, ನಾರಾಯಣ ಗೌಡ ಕೆ.ಸಿ, ರಜತ್ ಡಿ ನಾಮಪತ್ರ ಭೋಜಪ್ಪ ನಾಯ್ಕ ನಾಮಪತ್ರ ಹಿಂಪಡೆದರು.
ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಶೋಭಾ ಚುನಾವಣಾಧಿಕಾರಿಯಾಗಿದ್ದರು. ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ, ಮುಖ್ಯ ವ್ಯವಸ್ಥಾಪಕರಾದ ಚಂದ್ರಶೇಖರ ಮೇರ್ಕಜೆ ಹಾಗೂ ಸಿಬ್ಬಂದಿಗಳು ಸಹಕಾರ ನೀಡಿದರು.