ಮಂಡೆಕೋಲು:ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕ್ಲೀನ್ ಸ್ವೀಪ್ ಮಾಡುವ ಮೂಲಕ ಬಿಜೆಪಿ ಬೆಂಬಲಿತರು ಸಹಕಾರ ಸಂಘದ ಆಡಳಿತವನ್ನು ಮತ್ತೆ ಪಡೆದಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಕೇಶವಮೂರ್ತಿ ಹೆಬ್ಬಾರ್, ಪುರುಷೋತ್ತಮ ಕಾಡುಸೊರಂಜ, ಲಕ್ಷ್ಮಣ ಉಗ್ರಾಣಿಮನೆ, ಉಮೇಶ್ ಮಂಡೆಕೋಲು, ಆಶಿಕ್ ದೇವರಗುಂಡ, ಲಿಂಗಪ್ಪ ಬದಿಕಾನ ಜಯ ಗಳಿಸಿದರು.

ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುರೇಶ್ ಕಣೆಮರಡ್ಕ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ರಾಜಣ್ಣ ಪೇರಾಲುಮೂಲೆ, ಮಹಿಳಾ ಮೀಸಲು ಕ್ಷೇತ್ರದಲ್ಲಿ ಜಯಶ್ರೀ ಚೌಟಾಜೆ, ಕುಸುಮ ದೇವರಗುಂಡ,ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಶಶಿಧರ್ ಕಲ್ಲಡ್ಕ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯ ಸದಾನಂದ ಮಡಿವಾಳಮೂಲೆ, ಜಯಗಳಿಸಿದ್ದಾರೆ.