ಯೇನೆಕಲ್ಲು: ಯೇನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಕ್ಕೆ ಜ. 27ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು 11 ಸ್ಥಾನಗಳಲ್ಲಿ ಜಯ ಗಳಿಸಿದರೆ , ಕಾಂಗ್ರೆಸ್ 1 ಸ್ಥಾನದಲ್ಲಿ ಗೆಲುವು ದಾಖಲಿಸಿದೆ. ಸಾಮಾನ್ಯ ಸ್ಥಾನದಿಂದ
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಭವಾನಿಶಂಕರ ಪೂಂಬಾಡಿ, ಭರತ್ ನೆಕ್ರಾಜೆ, ಶಿವಪ್ರಸಾದ್ ಮಾದನಮನೆ, ದುರ್ಗಾಪ್ರಸಾದ್ ಪರಮಲೆ, ಗೋಪಾಲ ಎಂ. ಮಾಣಿಬೈಲು ವಿಜಯಿಗಳಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಶೋಕ್ ನೆಕ್ರಾಜೆ ಜಯಗಳಿಸಿದರು. ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿ
ಮಹಿಳಾ ಮೀಸಲು ಕ್ಷೇತ್ರದಿಂದ ವಿಶಾಲಾಕ್ಷಿ ದಯಾನಂದ ಕುಕ್ಕಪ್ಪನಮನೆ, ಶಶಿಕಲಾ ಕುಶಾಲಪ್ಪ ಅಮೈ ಜಯಗಳಿಸಿದ್ದಾರೆ. ಹಿಂದುಳಿದ ಪ್ರವರ್ಗ ಎ ಮೀಸಲು ಕ್ಷೇತ್ರದಿಂದ ತಿಮ್ಮಪ್ಪ ಪೂಜಾರಿ ಉಜಿರ್ ಕೋಡಿ ವಿಜೇತರಾಗಿದ್ದಾರೆ. ಬಿ ಮೀಸಲು ಕ್ಷೇತ್ರದಿಂದ ಪ್ರಶಾಂತ್ ದೋಣಿಮನೆ, ಪ.ಪಂಗಡ ದಿಂದ ರಮೇಶ್ ನಾಯ್ಕ ಬೂದಿಪಳ್ಳ, ಪ.ಜಾತಿ ಮೀಸಲು ಕ್ಷೇತ್ರದಿಂದ ಗಿರೀಶ್ ಪದ್ನಡ್ಕ ಜಯ ಗಳಿಸಿದ್ದಾರೆ.