ಸುಳ್ಯ:ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಸುಳ್ಯದಲ್ಲಿ ನಡೆಯಲಿದ್ದು ಸುಳ್ಯಕ್ಕೆ ಆಗಮಿಸಿದ ಸಚಿವರನ್ನು

ಅದ್ದೂರಿಯಾಗಿ ಸ್ವಾಗತಿಸಲಾಯಿತು. ಸುಳ್ಯದ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯಲಿರುವ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮಕ್ಕೆ
ಸಚಿವರು ಆಗಮಿಸಿದ್ದಾರೆ. ಚೆಂಡೆ, ವಾದ್ಯ ಮೇಳ, ಸಿಂಗಾರಿ ಮೇಳಗಳೊಂದಿಗೆ ಸಚಿವರನ್ನು ಸ್ವಾಗತಿಸಲಾಯಿತು. ಹಾರ ಹಾಕಿ, ಹೂಗುಚ್ಛ ನೀಡಿ ಸಚಿವರನ್ನು ಸ್ವಾಗತಿಸಲಾಯಿತು.







