ಸುಳ್ಯ:ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ಡಾ. ಕುರುಂಜಿ ವೆಂಕಟರಮಣ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಶಾಲಾ ಮುಖ್ಯ ವಿದ್ಯಾರ್ಥಿಯಾಗಿ ಮೋಹಕ್ ಕೆ, ಮುಖ್ಯ ವಿದ್ಯಾರ್ಥಿನಿಯಾಗಿ ಪ್ರತೀಕ್ಷಾ, ಉಪ ಮುಖ್ಯ ವಿದ್ಯಾರ್ಥಿಯಾಗಿ ಶ್ರುತರಾಜ್ ಬಿ.ಎಸ್., ಉಪ ಮುಖ್ಯ
ವಿದ್ಯಾರ್ಥಿನಿಯಾಗಿ ಫಾತಿಮತ್ ಝಿಬ ಸೇರಿದಂತೆ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಹೌಸ್ ನಾಯಕರಾಗಿ ವೀಕ್ಷಿತ್ ಎ.ಎಸ್. (ರೆಡ್ ರೂಬಿ), ದಿಶಾಂತ್ ರೈ (ಗ್ರೀನ್ ಎಮರಾಲ್ಡ್), ಅಕ್ಷಯ್ ಕಟ್ಟಕೋಡಿ (ಬ್ಲೂ ಸಫೈರ್) ಹಾಗೂ ಮುಹಮ್ಮದ್ ಹುಸೇನ್ ಪಿ.ಎಚ್. (ಯೆಲ್ಲೋ ಡೈಮಂಡ್) ಅಧಿಕಾರ ವಹಿಸಿಕೊಂಡರು.
ಮುಖ್ಯ ಅತಿಥಿಯಾಗಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ ನೂತನ ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್ ಹಾಗೂ ಅಧಿಕಾರ ಚಿಹ್ನೆಗಳನ್ನು ಪ್ರದಾನ ಮಾಡಿದರು.ಶಾಲಾ ಪ್ರಾಂಶುಪಾಲ ಅನಿಶ್ ನಾಧ್ ಇ.ಎಂ. ನೂತನ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕೆವಿಜಿ ಡೆಂಟಲ್ ಕಾಲೇಜಿನ ನಿರ್ದೇಶಕ ಮೌರ್ಯ ಆರ್. ಕುರುಂಜಿ,ಶಾಲಾ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ ಅಡ್ತಲೆ ಮಾತನಾಡಿದರು.
ವಿದ್ಯಾರ್ಥಿಗಳಾದ ಬೃಂದಾ ಜಿ. ರಾವ್, ಮಾನ್ಯ ನಿರೂಪಿಸಿದರು. ಧನ್ವಿ ರಮಣ್ ಸ್ವಾಗತಿಸಿ, ಪ್ರತ್ಯುಷ್ ವಂದಿಸಿದರು.ಶಾಲಾ ಉಪಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ, ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ, ಶಾಲಾ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಸಂತೋಷ್ ಕುತ್ತಮೊಟ್ಟೆ, ಪಿ.ಎಸ್. ಗಂಗಾಧರ,ಕೆವಿಜಿ ಡೆಂಟಲ್ ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿ.ಟಿ.,ಪ್ರಸನ್ನ ಕಲ್ಲಾಜೆ, ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.







