ಸುಳ್ಯ: ಆರೋಗ್ಯ, ಕುಟುಂಬ ಕಲ್ಯಾಣ ಹಾಗು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ಭಾನುವಾರ ಸುಳ್ಯಕ್ಕೆ ಭೇಟಿ ನೀಡಿದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಯು.ಟಿ.ಖಾದರ್ ಅವರು
ಮಡಿಕೇರಿಗೆ ತೆರಳುವ ಮಧ್ಯೆ ಸುಳ್ಯ ಅರಂಬೂರಿನ ಶ್ರೀಕೃಷ್ಣ ರಸಪಾಕ ಗ್ರಾಂಡ್ ಹೋಟೆಲ್ಗೆ ಭೇಟಿ ನೀಡಿ ಉಪಹಾರ ಸೇವಿಸಿ ಸ್ಥಳೀಯರಲ್ಲಿ ಉಭಯ ಕುಶಲೋಪರಿ ನಡೆಸಿ ತೆರಳಿದರು. ರಸಪಾಕ ಗ್ರಾಂಡ್ನ ಮಾಲಕರಾದ ನಾರಾಯಣ ಕೇಕಡ್ಕ, ಕೃಷ್ಣ ಕಾಮತ್ ಮತ್ತಿತರರು ಸೇರಿ ಸಚಿವರನ್ನು ಸ್ವಾಗತಿಸಿದರು. ಹಿರಿಯರಾದ ಪಿ.ಬಿ.ದಿವಾಕರ ರೈ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜು.6ರಂದು ಸುಳ್ಯದಲ್ಲಿ ಸಚಿವ ಯು.ಟಿ.ಖಾದರ್ ಅವರಿಗೆ ಸಾರ್ವಜನಿಕ ಸನ್ಮಾನ ನಡೆಯಲಿದೆ. ಸಚಿವರು ಸೋಮವಾರ ಬೆಳಿಗ್ಗೆ ಮಡಿಕೇರಿಯಿಂದ ಸುಳ್ಯಕ್ಕೆ ಆಗಮಿಸಲಿದ್ದಾರೆ.







