ಸುಳ್ಯ:ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ದ. ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಯು. ಟಿ. ಖಾದರ್ ಅವರಿಗೆ ಜುಲೈ 6 ರಂದು ಸುಳ್ಯದ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾ ಭವನದಲ್ಲಿ ನಡೆಯುವ ಸಾರ್ವಜನಿಕ ಅಭಿನಂದನಾ ಸಮಾರಂಭದ ಸಮಿತಿಯ, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಪೂರ್ವ ಸಿದ್ಧತೆಯ ಸಭೆ ಜರಗಿತು. ಪ್ರಧಾನ ಸಂಚಾಲಕ
ಭರತ್ ಮುಂಡೋಡಿ ವಿಷಯ ಪ್ರಸ್ತಾಪಿಸು ಸಾರ್ವಜನಿಕರ ಅಹವಾಲು ಸ್ವೀಕರಿಸಲು 2 ಕೌಂಟರ್ ತೆರೆಯಬೇಕು ಎಂದರು. ಸಚಿವರ ಸ್ವಾಗತ ಮೆರವಣಿಗೆ, ವಾಹನ ಜಾಥಾ ಮತ್ತಿತರ ವಿವಿಧ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು. ವಿವಿಧ ಉಪ ಸಮಿತಿಗಳ ಜವಾಬ್ದಾರಿ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಲಾಯಿತು. ಎನ್. ಎ. ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಡಾ. ಡಿ. ವಿ. ಲೀಲಾಧರ್, ಬಿ. ಟಿ. ಮಾಧವ, ಭವಾನಿ ಶಂಕರ ಅಡ್ತಲೆ, ಜಾಕೆ ಮಾಧವ ಗೌಡ,
ಪಿ. ಸಿ. ಜಯರಾಮ,ದಿನೇಶ್ ಮಡಪ್ಪಾಡಿ, ಎಸ್ ಸಂಶುದ್ದೀನ್,ಪಿ. ಎಸ್. ಗಂಗಾಧರ್, ಮೂಸ ಕುಂಞಿ ಪೈಂಬೆಚ್ಚಾಲ್, ಶಾಫಿ ಕುತ್ತಮೊಟ್ಟೆ, ರಾಜು ಪಂಡಿತ್,ಸಿದ್ದೀಕ್ ಕೊಕ್ಕೊ,ದೊಡ್ಡಣ್ಣ ಬರಮೇಲು, ಹರೀಶ್ ಬಂಟ್ವಾಳ್, ಸುಪ್ರೀತ್ ಮೋಂಟಡ್ಕ,ಭವಾನಿ ಶಂಕರ ಕಲ್ಮಡ್ಕ,ಗೋಕುಲ್ ದಾಸ್, ಇಸ್ಮಾಯಿಲ್ ಪಡ್ಪಿನಂಗಡಿ, ನಂದರಾಜ್ ಸಂಕೇಶ್, ಮಹೇಶ್ ಬೆಳ್ಳಾರ್ಕರ್, ಲತಾಶ್ರೀ ಸುಪ್ರೀತ್ ಮೊಂಟಡ್ಕ, ಜತ್ತಪ್ಪ ರೈ ಮಹಮ್ಮದ್ ಪವಾಝ್, ಸತ್ಯಕುಮಾರ್ ಆಡಿಂಜ, ಸಲೀಂ ಪೆರುಂಗೋಡಿ, ಕೆ. ಬಿ. ಇಬ್ರಾಹಿಂ,ಕೇಶವ ಆಲೆಟ್ಟಿ, ಶರೀಫ್ ಕಂಠಿ,ಹರೀಶ್ ಉಬರಡ್ಕ, ಪಿ.ಎ. ಮಹಮ್ಮದ್ ಇದ್ದರು.ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಸ್ವಾಗತಿಸಿ, ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ವಂದಿಸಿದರು.








